ಕೆಎನ್ಎನ್ಡಿಜಿಟಲ್ ಡೆಸ್ಕ್ : ದೀಪಾವಳಿ ಹಬ್ಬ ಮತ್ತು ತುಳಸಿ ಮದುವೆ ಮುಗಿದ ತಕ್ಷಣ ಮದುವೆಯ ಸೀಸನ್ ಪ್ರಾರಂಭವಾಗುತ್ತದೆ. ಪಂಚಾಂಗ ಶಾಸ್ತ್ರದ ಪ್ರಕಾರ ಈ ವರ್ಷ ನವೆಂಬರ್ 25 ರಿಂದ ಮುಂದಿನ ವರ್ಷ ಜೂನ್ 28 ರವರೆಗೆ ಒಟ್ಟು 58 ವಿವಾಹ ಮುಹೂರ್ತಗಳು ನಡೆಯಲಿವೆ. ಮೇ ತಿಂಗಳಲ್ಲಿ ಗರಿಷ್ಠ 14 ಮುಹೂರ್ತಗಳು, ಗುರುಗ್ರಹದ ಕಾರಣದಿಂದ ಏಪ್ರಿಲ್ನಲ್ಲಿ ಕೇವಲ ಒಂದು ಮುಹೂರ್ತವಿದೆ.
ಸಾಮಾನ್ಯವಾಗಿ ಮೇ ನಂತರ ಹೆಚ್ಚಿನ ಮದುವೆಗಳು ಏಪ್ರಿಲ್’ನಲ್ಲಿ ನಡೆಯುತ್ತವೆ. ಆದರೆ ಈ ಸಮಯದಲ್ಲಿ, ಗುರುಗ್ರಹದ ಕಾರಣದಿಂದ ಏಪ್ರಿಲ್ನಲ್ಲಿ ಕೇವಲ ಒಂದು ದಿನ (ಏಪ್ರಿಲ್ 30) ಇದೆ. ಇನ್ನು ಜೂನ್’ನಲ್ಲಿ 12 ಮುಹೂರ್ತಗಳು ಮತ್ತು ಫೆಬ್ರವರಿಯಲ್ಲಿ 10 ಮುಹೂರ್ತಗಳಿವೆ. 2023ರಲ್ಲಿ ಜೂನ್ 29ರಿಂದ ಚಾತುರ್ಮಾಸ ಪ್ರಾರಂಭವಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ ಸಮಯದಲ್ಲಿ ಯಾವುದೇ ಮದುವೆ, ಶುಭಕಾರ್ಯ ಮಾಡುವುದಿಲ್ಲ. ಇನ್ನು ಚಾತುರ್ಮಾಸ್ಯದ ಅಂತ್ಯ (24 ನವೆಂಬರ್ 2023). ಮುಂದಿನ ವರ್ಷ ಏಪ್ರಿಲ್ 22 ರವರೆಗೆ ಗುರುವು ಮೀನ ರಾಶಿಯಲ್ಲಿ ಅಂದರೆ ಸ್ವರಾಶಿಯಲ್ಲಿರುವುದರಿಂದ, ಈ ಅವಧಿಯಲ್ಲಿ ಎಲ್ಲಾ ರಾಶಿಗಳಿಗೆ ಗುರುವು ಮಂಗಳಕರವಾಗಿರುತ್ತದೆ. ಏಪ್ರಿಲ್ 23, 2023 ರಿಂದ ಏಪ್ರಿಲ್ 2024 ರವರೆಗೆ, ಗುರುವು ಮೇಷ ರಾಶಿಯಲ್ಲಿರುತ್ತಾನೆ. ಆದ್ದರಿಂದ ಈ ಅವಧಿಯಲ್ಲಿ ಮಿಥುನ, ಸಿಂಹ, ತುಲಾ, ಧನು, ಮೀನ ರಾಶಿಯವರಿಗೆ ಕುಬ್ಜ ಹಾಗೂ ವರನಿಗೆ ಉತ್ತಮ ಗುರುಬಲ ದೊರೆಯುತ್ತದೆ ಎನ್ನುತ್ತಾರೆ ಜೋತಿಷಿಗಳು.
ಯಾವ ತಿಂಗಳುಗಳಲ್ಲಿ ಎಷ್ಟು ಮದುವೆ ಮುಹೂರ್ತ.?
ನವೆಂಬರ್ (2022):25, 26, 28, 29
ಡಿಸೆಂಬರ್: 2, 4, 8, 9, 14, 16, 17, 18, 19
ಜನವರಿ (2023) : 18, 26, 27, 31
ಫೆಬ್ರವರಿ: 6, 7, 10, 11, 14, 16, 23, 24, 27, 28
ಮಾರ್ಚ್: 9, 13, 17, 18
ಏಪ್ರಿಲ್: 30
ಮೇ: 2, 3, 4, 7, 9, 10, 11, 12, 15, 16, 21, 22, 29, 30
ಜೂನ್: 1, 4, 7, 8, 11, 12, 13, 14, 23, 26, 27, 28
ಮಾಸಗಳ ಮುಂದೆ ಕೊಟ್ಟಿರುವ ಈ ದಿನಾಂಕಗಳು ಪಂಚಾಂಗಗಳ ಪ್ರಕಾರ ಮದುವೆಗೆ ಮಂಗಳಕರ ಸಮಯ.
BIG NEWS: ಭುವನೇಶ್ವರಿಯ ಭಾವಚಿತ್ರಕ್ಕೆ ಅವಮಾನ: ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ದೂರು
2023ರಲ್ಲಿ ಭಾರತ ‘ಧರ್ಮ ಗಲಭೆ’ಯಲ್ಲಿ ಮುಳುಗುತ್ತೆ, ಸೌರ ಸುನಾಮಿ ಅಪ್ಪಳಿಸುತ್ತೆ ; ಬಾಬಾ ವಂಗಾ ಭಯಾನಕ ಭವಿಷ್ಯ