ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಮಹತ್ವದ ಕ್ರಮವನ್ನು ಕೈಗೊಂಡಿದೆ. ಬರೋಬ್ಬರಿ 11 ಐಪಿಎಸ್ ಅಧಿಕಾರಿಗಳನ್ನು ( IPS Officer Transfer ) ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಐಪಿಎಸ್ ಅಧಿಕಾರಿ ( IPS Officer ) ಮಾಲಿನಿ ಕೃಷ್ಣಮೂರ್ತಿ ಅವರನ್ನು ಬೆಂಗಳೂರಿನ ಆಂತರೀಕ ವಿಭಾಗ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನ ಎಸಿಬಿ ಎಡಿಜಿಪಿಯಾಗಿದ್ದಂತ ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿ, ಬೆಂಗಳೂರಿನ ಕೆ ಎಸ್ ಆರ್ ಪಿ ಎಡಿಜಿಪಿ ಆಗಿ ನೇಮಿಸಲಾಗಿದೆ. ಕೆಎಸ್ ಆರ್ ಪಿಯ ಎಡಿಜಿಪಿ ರವಿ ಎಸ್ ಅವರನ್ನು ಬೆಂಗಳೂರಿನ ಪಿ ಸಿ ಎ ಎಸ್ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದಂತ ಅಜಯ್ ಹೀಲೋರಿ ಅವರನ್ನು ಡಿಸಿಆರ್ ಇ ಯ ಎಸ್ಪಿಯಾಗಿ ನೇಮಿಸಲಾಗಿದೆ. ಬೆಂಗಳೂರಿನ ಎಸಿಬಿಯ ಎಸ್ಪಿಯಾಗಿದ್ದಂತ ಯತೀಶ್ ಚಂದ್ರ ಜಿ ಹೆಚ್ ಅವರನ್ನು ಕ್ರೈಂ-3 ವಿಭಾಗದ ಡಿಸಿಪಿಯಾಗಿ ನೇಮಿಸಿದೆ.
BREAKING : 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: CIDಯಿಂದ ಮತ್ತೆ 6 ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ
ಕಲಬುರ್ಗಿಯ ಎಸಿಬಿಯ ಎಸ್ಪಿಯಾಗಿದ್ದಂತ ಅಮರನಾಥ್ ರೆಡ್ಡಿ ವೈ ಅವರನ್ನು ಕಲಬುರ್ಗಿಯ ಗುಪ್ತಚರ ವಿಭಾಗದ ಎಸ್ಪಿಯಾಗಿ ನೇಮಿಸಲಾಗಿದೆ. ಬಳ್ಳಾರಿಯ ಎಸಿಬಿ ಎಸ್ಪಿ ಶ್ರೀಹರಿ ಬಾಬು ಬಿಎಲ್ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ನೇಮಕ ಮಾಡಿದೆ.
2016ನೇ ಕರ್ನಾಟಕ ಕೇಟರ್ ಐಪಿಎಸ್ ಅಧಿಕಾರಿ ಶ್ರೀಹರಿ ಬಾಬು ಬಿಎಲ್ ಅವರನ್ನು ಬಳ್ಳಾರಿಯ ಎಸಿಬಿ ಎಸ್ಪಿಯಿಂದ ವರ್ಗಾವಣೆ ಮಾಡಿ, ಕರ್ನಾಟಕ ಲೋಕಾಯುಕ್ತ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ಎಸಿಬಿಯ ಎಸ್ಪಿಯಾಗಿದ್ದಂತ ಡಾ.ಶೋಭಾರಾಣಿ ವಿ ಜೆ ಅವರನ್ನು ವರ್ಗಾವಣೆ ಮಾಡಿ ಬಿಎಂಟಿಎಫ್ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ.
ಮೈಸೂರು ವಿಭಾಗದ ಎಸಿಬಿ ಎಸ್ಪಿಯಾಗಿದ್ದಂತ ಸಜೀತ್ ವಿಜೆ ಅವರನ್ನು ಕರ್ನಾಟಕ ಲೋಕಾಯುಕ್ತ ( Karnataka Lokayukta ) ಎಸ್ಪಿಯನ್ನಾಗಿ ನೇಮಿಸಿದೆ. ರಾಂ ಎಲ್ ಅರಶಿದ್ದಿ ಅವರನ್ನು ವಿಜಯಪುರ ಜಿಲ್ಲೆಯ ಹೆಚ್ಚುವರಿ ಎಸ್ಪಿಯಿಂದ ವರ್ಗಾವಣೆ ಮಾಡಿ ಕರ್ನಾಟಕ ಲೋಕಾಯುಕ್ತ ಎಸ್ಪಿಯನ್ನಾಗಿ ನೇಮಿಸಿದೆ. ಬೆಳಗಾವಿಯ ಎಸಿಬಿ ಎಸ್ಪಿ ಬಾಬಸಾಬ್ ನೇಮಗೌಡ ಅವರನ್ನು ಬೆಳಗಾವಿಯ ಗುಪ್ತಚರದ ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.