ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಮೂಡ್ ನಲ್ಲಿ ವ್ಯತ್ಯಾಸ ಆಗಲಿದೆ. ಇದಕ್ಕೆ ಕೆಲ ಘಟನೆಗಳು ಎಷ್ಟು ಕಾರಣವೋ ನಮ್ಮ ಜೀವನಶೈಲಿ ಕೂಡ ಅಷ್ಟೇ ಕಾರಣ. ದಿನವಿಡೀ ಉತ್ತಮ ಮನಸ್ಥಿತಿಯಲ್ಲಿ ನೀವಿರಬೇಕು, ನಿಮ್ಮ ಮೂಡ್ ಚೆನ್ನಾಗಿರಬೇಕೆಂದರೆ ತಜ್ಞರು ಹೇಳುವ ಈ ಟಿಪ್ಸ್ ಫಾಲೋ ಮಾಡಿ..
BIGG NEWS: ಬೆಳಗಾವಿಗೆ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದ ಪೊಲೀಸರು
ನಿಮ್ಮ ಮೂಡ್ ಚೆನ್ನಾಗಿರಲು ಜಂಕ್ ಫುಡ್ನಿಂದ ದೂರವಿರಿ, ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಉತ್ತಮ ಜೀವನಶೈಲಿಯನ್ನು ಹೊಂದಿರಿ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ನೀವು ಮಾನಸಿಕವಾಗಿ ಆರಾಮಾಗಿ ಇರಲು ಕೆಲವು ಸಲಹೆಗಳನ್ನು ನೀಡಿದ್ದಾರೆ, ಇದನ್ನು ಪರಿಶೀಲಿಸಿ.
ಆರೋಗ್ಯಕರ ಪದಾರ್ಥಗಳನ್ನು ತಿನ್ನಿರಿ: ಸಾಲ್ಮನ್, ಸಾರ್ಡೀನ್ ನಂತಹ ಮೀನುಗಳು ಆರೋಗ್ಯಕರ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇವು ನಿಮ್ಮ ಮೂಡ್ ಚೆನ್ನಾಗಿರಲು ಸಹಕರಿಸುತ್ತವೆ. ಕರಿದ, ಹುರಿದ ಪದಾರ್ಥಗಳಿಂದ ದೂರವಿರಿ: ಕರಿದ ಪದಾರ್ಥಗಳು ಬೇಗನೇ ಜೀರ್ಣವಾಗುವುದಿಲ್ಲ. ಇದು ಮಾನಸಿಕ ಖಿನ್ನತೆಗೆ ಕೂಡ ಕಾರಣವಾಗುತ್ತದೆ.
ಮದ್ಯಪಾನ ಮಾಡದಿರಿ: ಆಲ್ಕೋಹಾಲ್ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಖಿನ್ನತೆಗೆ ಕಾರಣವಾಗುತ್ತದೆ. ಹೀಗಾಗಿ ನೀವು ಮದ್ಯವನ್ನು ತ್ಯಜಿಸುವುದು ಉತ್ತಮ.
BIGG NEWS: ಬೆಳಗಾವಿಗೆ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದ ಪೊಲೀಸರು
ವಿಶ್ರಾಂತಿ ಪಡೆಯಿರಿ: ಸರಿಯಾದ ನಿದ್ರೆ ಮತ್ತು ಸರಿಯಾದ ಕೆಲಸದ ವೇಳಾಪಟ್ಟಿಯು ಮನಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ
ದೇಹದ ಮೇಲೆ ಸೂರ್ಯನ ಕಿರಣ ಬೀಳಲಿ: ನಮ್ಮ ದೇಹವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ಖಿನ್ನತೆಯನ್ನು ತಡೆಯಲು ಸಹಾಯ ಮಾಡುವ ಹಾರ್ಮೋನ್ ಆಗಿದೆ.