ಬೆಂಗಳೂರು: ಬಡವರಿಗೆ, ಹಸಿದವರಿಗೆ, ದುಡಿಯುವ ವರ್ಗದವರಿಗೆ ಬೆಂಗಳೂರಿನಲ್ಲಿ ( Bengaluru ) ಹಸಿವು ನೀಗಿಸೋ ಸಲುವಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದ್ರೇ ಈಗ ಬಿಬಿಎಂಪಿಯಿಂದ ಸಬ್ಸಿಡಿ ಬಿಡುಗಡೆ ವಿಳಂಬದ ಕಾರಣ, 40 ಇಂದಿರಾ ಕ್ಯಾಂಟೀನ್ ಗಳಿಗೆ ( Indira Canteen ) ಬೀಗ ಬಿದ್ದಿದೆ ಎಂಬುದಾಗಿ ಹೇಳಲಾಗುತ್ತಿದೆ.
ನಾಳೆ ಸಂಜೆ 4 ಗಂಟೆಗೆ ನಟ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ – ಸಿಎಂ ಬೊಮ್ಮಾಯಿ
ಬೆಂಗಳೂರುನ ಸಂಪಂಗಿರಾಮನಗರ, ಬಿಸ್ಮಿಲ್ಲಾ ನಗರದ ಟ್ಯಾಂಕ್ ಬಂಡ್ ರಸ್ತೆ, ಪುಲಕೇಶಿ ನಗರ, ಹೆಚ್ ಎಸ್ ಆರ್ ಲೇಔಟ್ ನ ಸೋಮಸುಂದರ ಪಾಳ್ಯ, ಮಹದೇವಪುರದ ಎ ನಾರಾಯಣಪುರ, ಕೋಗಿಲು, ಸುಬ್ರಹ್ಮಣ್ಯಪುರಂನ ವಸಂತ ನಗರ, ಹೊಸಹಳ್ಳಿ ಹಾಗೂ ಪ್ರಕೃತಿ ನಗರ ಸೇರಿದಂತೆ ಒಟ್ಟು 40 ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಿವೆ ಎಂದು ಹೇಳಲಾಗುತ್ತಿದೆ.
BIG NEWS: ‘ಆಶ್ರಯ ಮನೆ ಮಾಲೀಕ’ರಿಗೆ ಬಿಗ್ ಶಾಕ್: ವಾಸವಿಲ್ಲದೇ ಇದ್ದರೇ ‘ಆಶ್ರಯ ಮನೆ ರದ್ದು’
ಅಂದಹಾಗೆ ಬೆಂಗಳೂರಿನ 198 ವಾರ್ಡ್ ಗಳಲ್ಲಿ ತಲಾ ಒಂದರಂತೆ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದ್ರೇ 20 ವಾರ್ಡ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇದೀಗ ಪಾಲಿಕೆಯಿಂದ ಸಬ್ಸಿಡಿ ಬಿಡುಗಡೆ ವಿಳಂಬದ ಕಾರಣದಿಂದಾಗಿ ಮತ್ತೆ 40 ಇಂದಿರಾ ಕ್ಯಾಂಟೀನ್ ಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿವೆ. ಈ ಮೂಲಕ ನಗರದಲ್ಲಿ ಬಡ, ಮಧ್ಯಮವರ್ಗದವರ ಹಸಿವು ನೀಗಿಸುತ್ತಿದ್ದಂತ ಇಂದಿರಾ ಕ್ಯಾಂಟೀನ್ ಮುಚ್ಚುವ ಹಂತವನ್ನು ತಲುಪಿದಂತೆ ಆಗಿದೆ.
Teacher Jobs: ‘ಇಂಗ್ಲೀಷ್ ಶಿಕ್ಷಕ’ರು ಬೇಕಾಗಿದ್ದಾರೆ, ಈ ಕೂಡಲೇ ಸಂಪರ್ಕಿಸಿ
ಈ ಬಗ್ಗೆ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದಲ್ಲ. 20 ಕ್ಯಾಂಟೀನ್ಗಳಿಗೆ ಬೀಗ ಹಾಕಿದ ಬಸವರಾಜ ಬೊಮ್ಮಾಯಿ ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ? ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ? ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ? ಉತ್ತರಿಸಿ ಎಂಬುದಾಗಿ ಸಿಎಂ ಅವರನ್ನು ಕೇಳಿದೆ.
ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದಲ್ಲ.
20 ಕ್ಯಾಂಟೀನ್ಗಳಿಗೆ ಬೀಗ ಹಾಕಿದ @BSBommai ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ?
ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ?ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ?#SayCM pic.twitter.com/Y2ZmVGOzdJ
— Karnataka Congress (@INCKarnataka) October 31, 2022