ಕಿನ್ಶಾಸಾ (ಕಾಂಗೊ): ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿಯ ಅತಿದೊಡ್ಡ ಕ್ರೀಡಾಂಗಣದಲ್ಲಿ ಭಾನುವಾರ ಆಫ್ರಿಕನ್ ಸಂಗೀತ ತಾರೆ ಫಾಲಿ ಇಪುಪಾ(Fally Ipupa) ಅವರ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಉಂಟಾಗಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 11 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕ್ರೀಡಾಂಗಣವು ಅದರ ಸಾಮರ್ಥ್ಯಕ್ಕೂ ಮೀರಿ ಜನರು ಜಮಾಯಿಸಿದ್ ಕಾರಣ ಕಾಲ್ತುಳಿತ ಉಂಟಾಗಿ ಸಾವು-ನೋವುಗಳಿಗೆ ಕಾರಣವಾಗಿದೆ. ಪರಿಣಾಮವಾಗಿ, ಗುಂಪಿನಲ್ಲಿ ಕೆಲವರು ವಿಐಪಿ ಮತ್ತು ಮೀಸಲು ವಿಭಾಗಗಳಿಗೆ ಬಲವಂತವಾಗಿ ನುಗ್ಗಿದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು ಎಂದು ಅಲ್ ಜಜೀರಾ ವರದಿ ಮಾಡಿದೆ.
ಆಫ್ರಿಕಾದ ಪ್ರಮುಖ ಸಂಗೀತಗಾರ 44 ವರ್ಷದ ಫಾಲಿ ಇಪುಪಾ ಅವರ ಬೃಹತ್ ಸಂಗೀತ ಕಚೇರಿ ನಡೆಯುತ್ತಿದ್ದ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಕಿನ್ಶಾಸಾದಲ್ಲಿ ಜನಿಸಿದ ಇಪುಪಾವನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜನಸಂದಣಿಯಿಂದ ಈ ಸಾವು-ನೋವು ಸಂಭವಿಸಿದೆ.
BIGG NEWS : ರಾಜ್ಯದ ಜನರೇ ಎಚ್ಚರ! ಇನ್ನೂ ನಾಲ್ಕು ದಿನ ಮುಂದುವರೆಯಲಿದೆ ಮೈ ಕೊರೆಯುವ ಚಳಿ!
BIGG NEWS : ರಾಜ್ಯ ಸರ್ಕಾರದಿಂದ `ಕುರಿಗಾಹಿ’ಗಳಿಗೆ ಭರ್ಜರಿ ಗುಡ್ ನ್ಯೂಸ್ : 354 ಕೋಟಿ ರೂ. ಯೋಜನೆಗೆ ಅನುಮೋದನೆ
BIGG NEWS : ರಾಜ್ಯದ ಜನರೇ ಎಚ್ಚರ! ಇನ್ನೂ ನಾಲ್ಕು ದಿನ ಮುಂದುವರೆಯಲಿದೆ ಮೈ ಕೊರೆಯುವ ಚಳಿ!