ಬೆಂಗಳೂರು: ಮುಖ್ಯಮಂತ್ರಿಯವರು ಧಮ್ಮು, ತಾಕತ್ತಿದ್ದರೇ ಬಿಜೆಪಿಯ ವಿಜಯ ಪತಾಕೆ ತಡೆಯಲಿ ಎಂಬುದಾಗಿ ಸವಾಲು ಹಾಕುತ್ತಿದ್ದಾರೆ. ಆದ್ರೇ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ( CM Basavaraj Bommai ) ಮೊದಲು ಈ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ನೀಡಿ ತಮ್ಮ ಧಮ್ಮು, ತಾಕತ್ತನ್ನು ತೋರಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಸವಾಲು ಹಾಕಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕ ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ದಿನೇ ದಿನೆ ಸಾಕ್ಷಿಗಳು ಹೊರಬರುತ್ತಿವೆ. ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರ ಜನರ ಗಮನಕ್ಕೆ ಬರುತ್ತಿದೆ. ನೊಂದಿರುವ ಜನರು, ಸರ್ಕಾರದ ಮಂತ್ರಿಗಳು, ಬಿಜೆಪಿ ಶಾಸಕರು ( BJP MLA ) ಹಾಗೂ ಕಾರ್ಯಕರ್ತರು ತಮ್ಮ ಮನಸಿನ ನೋವು ಹೇಳುತ್ತಿದ್ದಾರೆ ಎಂದರು.
BIGG NEWS ; ನಿರುದ್ಯೋಗ, ಭ್ರಷ್ಟಾಚಾರ ಕುರಿತು ನಗರ ಭಾರತೀಯರು ಹೆಚ್ಚು ಚಿಂತಿತರಾಗಿದ್ದಾರೆ ; ಸಮೀಕ್ಷೆ
ಇತ್ತೀಚೆಗೆ ಕೆ.ಆರ್. ಪುರದ ಪೊಲೀಸ್ ಅಧಿಕಾರಿ ನಂದೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಇದು ಸಹಜ ಸಾವಲ್ಲ, ಸರ್ಕಾರ ಮಾಡಿರುವ ಕೊಲೆ ಎಂದು ಹೇಳಲು ಬಯಸುತ್ತೇನೆ. ಮಾನ್ಯ ಸಚಿವರಾದ ಎಂಟಿಬಿ ನಾಗರಾಜ್ ಅವರು ನಂದೀಶ್ ಅವರ ಪಾರ್ಥೀವ ಶರೀರದ ದರ್ಶನಕ್ಕೆ ಹೋದ ಸಂದರ್ಭದಲ್ಲಿ 70-80 ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡು ಬಂದರೆ ಹೃದಯಾಘಾತ ಆಗದೇ ಇರುತ್ತದೆಯೇ ಎಂದು ಹೇಳಿದ್ದಾರೆ. ಈ ಸಂಭಾಷಣೆ ಬಹಿರಂಗವಾಗಿದೆ. ಆ ಮೂಲಕ ಈ ಸರ್ಕಾರದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಲಂಚ ಸ್ವೀಕರಿಸಲಾಗುತ್ತದೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇವೆಲ್ಲವೂ 40% ಸರ್ಕಾರದ ಅಕ್ರಮಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಇನ್ನು ಹುಬ್ಬಳ್ಳಿಯ ಶಾಂತಿನಗರದ ಗುತ್ತಿಗೆದಾರ ಬಸವರಾಜ್ ಅಮರಗೋಳ್ ಎಂಬಾತ ಕೋವಿಡ್ ಸಮಯದಲ್ಲಿ ಪರಿಕರಗಳ ಸರಬರಾಜು ಮಾಡಿದ್ದು, ಆತನಿಗೆ ಸರ್ಕಾರದಿಂದ ಬಿಲ್ ಪಾವತಿ ಆಗಿಲ್ಲ. ಈ ಬಿಲ್ ಪಾವತಿಗೆ ಪಂಚಾಯತಿ ಅಧಿಕಾರಿಗಳು 30-40% ಲಂಚ ಕೇಳುತ್ತಿದ್ದಾರೆ ಎಂದು ದಿನಾಂಕ 22-02-2022ರಲ್ಲಿ ದೂರು ದಾಖಲಿಸಿದ್ದಾರೆ. ಅಂಡರ್ ಸೆಕ್ರೆಟರಿ ಸುಶೀಲಾ ಅವರನ್ನು ಭೇಟಿ ನೀಡಿದಾಗ ಅವರು ಆರ್ ಡಿಪಿಆರ್ ಇಲಾಖೆ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಲು ತಿಳಿಸಿದ್ದಾರೆ. ಇಒ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದು, ನಾನು ಸಾಲ ಮಾಡಿ ಈ ಪರಿಕರಗಳ ಪೂರೈಕೆ ಮಾಡಿದ್ದು, ನನಗೆ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ ನನಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
BIG NEWS: ‘ಸಚಿವ ಶ್ರೀರಾಮುಲು’ಗೆ ‘ಮೊಳಕಾಲ್ಮೂರು ಕ್ಷೇತ್ರ’ದಲ್ಲಿ ಸೋಲಿನ ಭೀತಿ: ‘ಹೊಸ ಕ್ಷೇತ್ರ’ಕ್ಕೆ ಹುಡುಕಾಟ?
ಇದರ ಜವಾಬ್ದಾರಿಯನ್ನು ಯಾರು ಹೊರಬೇಕು? ಸಚಿವರು ಹೇಳಿರುವಂತೆ 70-80 ಲಕ್ಷ ಹಣ ಗೃಹ ಸಚಿವರಿಗೆ ತಲುಪಿತಾ? ಮುಖ್ಯಮಂತ್ರಿ ಕಚೇರಿ ತಲುಪಿತಾ ಅಥವಾ ಸ್ಥಳೀಯ ಮಂತ್ರಿಗೆ ತಲುಪಿತೇ? ಎಂಬುದು ಬಹಿರಂಗವಾಗಬೇಕು. ಸಚಿವರ ಈ ಮಾತನ್ನು ನಿರಾಕರಿಸಲು ಸಾಧ್ಯವಿಲ್ಲ. ಹೀಗಾಗಿ ಗೃಹ ಸಚಿವರು, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಅಥವಾ ಈ ಹೇಳಿಕೆ ನೀಡಿರುವ ಸಚಿವರೇ ರಾಜೀನಾಮೆ ನೀಡಬೇಕು ಎಂದರು.
ಸರ್ಕಾರದಲ್ಲಿ ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಹಣವಿಲ್ಲದೇ ಪೋಸ್ಟಿಂಗ್, ನೇಮಕ ಮಾಡುತ್ತಿಲ್ಲ. ಎಲ್ಲ ಹುದ್ದೆಗಳಿಗೂ ಸರ್ಕಾರ ದರ ನಿಗದಿ ಮಾಡಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಜತೆಗೆ ಈ 40% ಕಮಿಷನ್ ವಿವಾದ ಮುಚ್ಚಿಹಾಕಲು ಮಾಧ್ಯಮದವರಿಗೆ ಹಣದ ಆಮಿಷ ನೀಡಲಾಗಿತ್ತು. ಈ ಆಮಿಷ ನಿರಾಕರಿಸಿದ ಪತ್ರಕರ್ತರಿಗೆ ರಾಜ್ಯದ ಜನರ ಪರವಾಗಿ ಕೋಟಿ ನಮನ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾರಂಗ ಕೆಲಸ ಮಾಡಬೇಕು. ಸದ್ಯ ಈ ಭ್ರಷ್ಟ ವ್ಯವಸ್ಥೆ ವಿರುದ್ಧ ನಮಗಿಂತ ಹೆಚ್ಚಾಗಿ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಆಮೂಲಕ ಸರ್ಕಾರದ ಅಕ್ರಮಗಳನ್ನು ಬಯಲು ಮಾಡಿದ್ದಾರೆ ಎಂದು ತಿಳಿಸಿದರು.
BIGG NEWS : ಶಾಸಕ ಅರವಿಂದ ಬೆಲ್ಲದ್ ಹೆಸರಿನಲ್ಲಿ ಡೆತ್ ನೋಟ್ ಬರೆದು ಮಹಿಳೆ ಆತ್ಮಹತ್ಯೆಗೆ ಯತ್ನ!
ಈ ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ರೀತಿ ತಾಂಡವವಾಡುತ್ತಿದೆ ಎಂದರೆ ಸರ್ಕಾರಿ ಹುದ್ದೆಗಳ ದರವನ್ನು ಹೊಟೇಲ್ ನಲ್ಲಿ ತಿಂಡಿಗಳ ಪಟ್ಟಿಯಂತೆ ಮಾಡಲಾಗಿದೆ. ಇದನ್ನು ವರದಿ ಮಾಡಿರುವ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಕೂಡ ಸಿಹಿತಿಂಡಿಯಂತಹ ಉಡುಗೊರೆ ನೀಡಿದ್ದೇವೆ. ಆದರೆ ನನ್ನ ಅನುಭವದಲ್ಲಿ ಈ ರೀತಿ ಹಣ ನೀಡಿದ ಉದಾಹರಣೆ ಕಂಡಿಲ್ಲ. ಆ ಮೂಲಕ ಮಾಧ್ಯಮದವರನ್ನು ಭ್ರಷ್ಟಾಚಾರದ ಸುಳಿಗೆ ಸೆಳೆಯಲು ಪ್ರಯತ್ನಿಸಲಾಗಿದೆ. ಇದನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಇನ್ನು ತೆಲಂಗಾಣದಲ್ಲಿ ಆಪರೇಷನ್ ಕಮಲದ ಭಾಗವಾಗಿ ಶಾಸಕರ ಖರೀದಿಗೆ ಮುಂದಾದಾಗ ಅಲ್ಲಿನ ಸರ್ಕಾರ, ಶಾಸಕರು, ಮಾಧ್ಯಮಗಳು ಕೈಗೊಂಡಿರುವ ದಿಟ್ಟ ತೀರ್ಮಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ತೆಲಂಗಾಣದಲ್ಲಿ ಆಪರೇಷನ್ ಕಮಲದಲ್ಲಿ ಶಾಸಕರ ಖರೀದಿಗೆ 100 ಕೋಟಿ ಆಮಿಷ ನೀಡಿದವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
Job Alert: ಸಮುದಾಯ ಆರೋಗ್ಯ ಅಧಿಕಾರಿ(CHO) ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 30 ಸಾವಿರ ವೇತನ
ಕರ್ನಾಟಕದಲ್ಲಿ ಆರಂಭವಾದ ಆಪರೇಷನ್ ಕಮಲ ದೇಶದ ವಿವಿಧ ರಾಜ್ಯಗಳಿಗೆ ಹಬ್ಬಿ, ಈಗ ತೆಲಂಗಾಣ ತಲುಪಿದೆ. ಇದು ಗಂಭೀರ ವಿಚಾರವಾಗಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಇನ್ನಷ್ಟು ರಾಜ್ಯಗಳು ಇದಕ್ಕೆ ಬೆಲೆ ತೆರಬೇಕಾಗಲಿದೆ ಎಂದರು.
ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ಆವರಿಸಿದೆ. ರಸ್ತೆಗಳ ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿರುವುದರಿಂದ ರಸ್ತೆಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ರಸ್ತೆಗಳು ಗುಂಡಿ ಬಿದ್ದು, ಅಪಾರ ಸಾವು-ನೋವು ಸಂಭವಿಸುತ್ತಿವೆ. ಇದು ಸರ್ಕಾರದ ಕೊಲೆಯಾಗಿದೆ. ವಾಹನ ಸವಾರರರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಇವೆಲ್ಲವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಮಾಧ್ಯಮಗಳು ಈ ವಿಚಾರಗಳನ್ನು ಬಯಲಿಗೆ ತರುತ್ತಿರುವುದು ಸ್ವಾಗತಾರ್ಹ. ಈ ಸರ್ಕಾರಕ್ಕೆ ಜನರ ಜೀವಕ್ಕಿಂತ ಹಣ ಮಾಡುವುದೇ ಆದ್ಯತೆಯಾಗಿದೆ’ ಎಂದರು.
BIG NEWS: ‘ಸಚಿವ ಶ್ರೀರಾಮುಲು’ಗೆ ‘ಮೊಳಕಾಲ್ಮೂರು ಕ್ಷೇತ್ರ’ದಲ್ಲಿ ಸೋಲಿನ ಭೀತಿ: ‘ಹೊಸ ಕ್ಷೇತ್ರ’ಕ್ಕೆ ಹುಡುಕಾಟ?
ಹುಬ್ಬಳ್ಳಿ ಗುತ್ತಿಗೆದಾರನ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದಾಗ, ‘ಬಸವರಾಜ ಅಮರಗೋಳ್ ಎಂಬ ಗುತ್ತಿಗೆದಾರ ಲಂಚಕ್ಕಾಗಿ ಪೀಡಿಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರೂ ಮುಖ್ಯಮಂತ್ರಿಗಳು ಈತನ ದೂರಿನ ಮೇಲೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಸೂಚನೆ ನೀಡಿರುವುದಾಗಿ ಆತ ತನ್ನ ಪತ್ರದಲ್ಲಿ ಬರೆದು ದಯಾಮರಣಕ್ಕೆ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾನೆ. ಈಶ್ವರಪ್ಪ ಅವರ ಪ್ರಕರಣದಲ್ಲಿ ರಾಜೀನಾಮೆ ನೀಡುವ ಮುನ್ನವೇ ಸರ್ಕಾರ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಈಗ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದು, ಭ್ರಷ್ಟಾಚಾರ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಸರ್ಕಾರ ಮುಚ್ಚಿಹಾಕುತ್ತಿದೆ’ ಎಂದು ಉತ್ತರಿಸಿದರು.