ಬೆಂಗಳೂರು: ಎನ್.ಆರ್.ರಮೇಶ್ ನನ್ನ ಮೇಲೆ 50 ಕೇಸ್ ದಾಖಲಿಸಿದ್ದಾನೆ. ಎಲ್ಲಾ ಕೇಸ್ಗಳು ವಜಾ ಆಗಿದೆ. ಸಾಲ ಪಡೆದಿರುವ ಬಗ್ಗೆಯೂ ಬೇಕಾದ್ರೆ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಚೆಕ್ ಮೂಲಕ 1.30 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಾನು ನನ್ನ ಸ್ನೇಹಿತನ ಬಳಿ ಸೈಟ್ ಖರೀದಿ ಮಾಡಲು ಸಾಲ ತೆಗೆದುಕೊಂಡಿದ್ದು ಸತ್ಯ. ಅವರ ಬಳಿ ಸಾಲ ಪಡೆದಿದ್ದು ನಿಜ. ಸಾಲ ಪಡೆದು ನಾನು ಮೈಸೂರಿನಲ್ಲಿ ಸೈಟ್ ತೆಗೆದುಕೊಂಡಿದ್ದು ಸತ್ಯ. ಸಾಲ ತೆಗೆದುಕೊಳ್ಳುವುದು ತಪ್ಪಾ ಎಂದು ಎನ್ಆರ್ ರಮೇಶ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಎನ್.ಆರ್.ರಮೇಶ್ ನನ್ನ ಮೇಲೆ 50 ಕೇಸ್ ದಾಖಲಿಸಿದ್ದಾನೆ. ಎಲ್ಲಾ ಕೇಸ್ಗಳು ವಜಾ ಆಗಿದೆ. ಸಾಲ ಪಡೆದಿರುವ ಬಗ್ಗೆಯೂ ಬೇಕಾದ್ರೆ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದರು.
BREAKING NEWS : ಸ್ವಾವಲಂಬನೆಯತ್ತ ಮತ್ತೊಂದು ಹೆಜ್ಜೆ ; ‘ಸಿ-295 ವಿಮಾನ ಉತ್ಪಾದನಾ ಘಟಕ’ಕ್ಕೆ ಪ್ರಧಾನಿ ಮೋದಿ ಅಡಿಪಾಯ
ನ. 6 ರಂದು ಕರ್ನಾಟಕಕ್ಕೆ AICC ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ ಆಗಮನ : ಅದ್ದೂರಿ ಸ್ವಾಗತಕ್ಕೆ ಸಜ್ಜಾದ ಕಾಂಗ್ರೆಸ್