ಬೆಂಗಳೂರು: ಕೋಲಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣದಲ್ಲಿ ( Health and Family Welfer Department ) ಖಾಲಿ ಇರುವಂತ ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಯ ಭರ್ತಿಗೆ ( Community Health Officer Recruitment ) ಅರ್ಜಿಯನ್ನು ಆಹ್ವಾನಿಸಲಾಗಿದೆ.
BIG NEWS: ‘ಸಚಿವ ಶ್ರೀರಾಮುಲು’ಗೆ ‘ಮೊಳಕಾಲ್ಮೂರು ಕ್ಷೇತ್ರ’ದಲ್ಲಿ ಸೋಲಿನ ಭೀತಿ: ‘ಹೊಸ ಕ್ಷೇತ್ರ’ಕ್ಕೆ ಹುಡುಕಾಟ?
ಈ ಕುರಿತಂತೆ ಕೋಲಾರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಖಾಲಿ ಇರುವಂತ 17 ಸಮುದಾಯ ಆರೋಗ್ಯ ಅಧಿಕಾರಿಗಳ ( Community Health Officer – CHO ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದ್ದಾರೆ.
Job Alert: ಸಮುದಾಯ ಆರೋಗ್ಯ ಅಧಿಕಾರಿ(CHO) ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 30 ಸಾವಿರ ವೇತನ
ಹುದ್ದೆಗಳ ವಿವರ – ಸಮುದಾಯ ಆರೋಗ್ಯ ಅಧಿಕಾರಿ – 17 ಹುದ್ದೆಗಳು
ವಿದ್ಯಾರ್ಹತೆ – ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದಂತ ಅರ್ಹ ಅಭ್ಯರ್ಥಿಗಳು ಬಿಎಸ್ಸಿ ಮತ್ತು ಪೋಸ್ಟ್ ಬಿಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
BIGG NEWS : ಶಾಸಕ ಅರವಿಂದ ಬೆಲ್ಲದ್ ಹೆಸರಿನಲ್ಲಿ ಡೆತ್ ನೋಟ್ ಬರೆದು ಮಹಿಳೆ ಆತ್ಮಹತ್ಯೆಗೆ ಯತ್ನ!
ಮಾಸಿಕ ಸಂಭಾವನೆ – ಪ್ರತಿ ತಿಂಗಳು ರೂ.24,200 ಹೆಚ್ಚಿನ ಆಧ್ಯತೆವುಳ್ಳ ಜಿಲ್ಲೆಗಳು ಹಾಗೂ ರೂ.22,000 ಆಧ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಬಯಸುವವರಿಗೆ ನೀಡಲಾಗುತ್ತದೆ. ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ರೂ.8,000 ನೀಡಲಾಗುತ್ತದೆ.
ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳು http://karunadu.karnataka.gov.in/hfw ಜಾಲತಾಣಕ್ಕೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ದಿನಾನಕ 27-10-2022ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-11-2022 ಆಗಿರುತ್ತದೆ. ಈ ಹುದ್ದೆಗಳಿಗೆ ದಿನಾಂಕ 19-11-2022ರಂದು ಆನ್ ಲೈನ್ ಮೂಲಕ ಆಯ್ಕೆಗಾಗಿ ಪರೀಕ್ಷೆ ನಡೆಯಲಿದೆ.