ರಾಮನಗರ: ಜಿಲ್ಲೆಯ ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಗಡಿಯ ಕಣ್ಣೂರು ಮಠದ ಮೃತ್ಯುಂಜಯ ಶ್ರೀಗಳನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಅವರಿಗೆ ಇದೀಗ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
BIGG NEWS ; ನಿರುದ್ಯೋಗ, ಭ್ರಷ್ಟಾಚಾರ ಕುರಿತು ನಗರ ಭಾರತೀಯರು ಹೆಚ್ಚು ಚಿಂತಿತರಾಗಿದ್ದಾರೆ ; ಸಮೀಕ್ಷೆ
ಬಂಡೇಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಸಹೋದರ ಸಂಬಂಧಿಯಾಗಿದ್ದಂತ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಯೇ ಹನಿಟ್ರ್ಯಾಫ್ ಮಾಡಿಸಿರೋದಾಗಿ ತಿಳಿದು ಬಂದಿತ್ತು. ಈ ಸಂಬಂಧ ಪೊಲೀಸರು ಮೃತ್ಯುಂಜಯ ಶ್ರೀಗ ಹಾಗೂ ಅವರ ಜೊತೆಗೆ ಹನಿಟ್ರ್ಯಾಪ್ ಮಾಡಿದ್ದಂತ ಯುವತಿಯನ್ನು ಬಂಧಿಸಿದ್ದರು.
Karnataka Politics: ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ – ಕಾಂಗ್ರೆಸ್
ಹೀಗೆ ಬಂಧಿಸಲ್ಪಟ್ಟಿದ್ದಂತ ಮೃತ್ಯುಂಜಯ ಶ್ರೀಗಳನ್ನು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗಿ, ಹಾಜರು ಪಡಿಸಲಾಗಿತ್ತು. ಅವರಿಗೆ ಇದೀಗ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಅಂದಹಾಗೇ ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ಮಠದಲ್ಲೇ ನೇಣಿಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್ ನಡೆದಿದ್ದು, ಡೆತ್ನೋಟ್ನಲ್ಲಿ ಸಂಚಿನ ಬಗ್ಗೆ ಕುಂಚಗಲ್ ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿ ಬರೆದಿದ್ದಾರೆ. ಕುಂಚಗಲ್ ಸ್ವಾಮೀಜಿ ಕೆಳಗಿಳಿಸಲು ನಡೆದಿತ್ತು ಮಾಸ್ಟರ್ ಪ್ಲಾನ್, ಮಾಸ್ಟರ್ ಪ್ಲಾನ್ ಹಿಂದೆ ಇರೋ ವ್ಯಕ್ತಿ ಮತ್ತೋರ್ವ ಸ್ವಾಮೀಜಿ ಎನ್ನಲಾಗಿತ್ತು.
BIGG NEWS ; ನಿರುದ್ಯೋಗ, ಭ್ರಷ್ಟಾಚಾರ ಕುರಿತು ನಗರ ಭಾರತೀಯರು ಹೆಚ್ಚು ಚಿಂತಿತರಾಗಿದ್ದಾರೆ ; ಸಮೀಕ್ಷೆ