ಚಿತ್ರದುರ್ಗ: ಕಳೆದ ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಗೆಲುವು ಕಂಡಿದ್ದಂತ ಸಚಿವ ಬಿ.ಶ್ರೀರಾಮುಲುಗೆ ( Minister B Sriramulu ) ಈಗ ಸೋಲಿನ ಭೀತಿ ಎದುರಾಗಿದೆ ಎನ್ನಲಾಗಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಂತ ಕಾಂಗ್ರೆಸ್ ನ ಸ್ಥಳೀಯ ಯುವ ನಾಯಕ ಡಾ.ಯೋಗೇಶ್ ಬಾಬುಗೆ ( Congress Leader Dr Yogesh Babu ) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election -2023 ) ಗೆಲುವು ಸಾಧಿಸಲಿದ್ದಾರೆ ಎನ್ನಲಾಗುತ್ತಿದೆ.
BIG BREAKING NEWS: ಬಸವಲಿಂಗಸ್ವಾಮೀಜಿ ವಿರುದ್ಧ ಷಡ್ಯಂತ್ರ ಆರೋಪ: ಮೃತ್ಯುಂಜಯ ಶ್ರೀಗೆ 14 ದಿನ ನ್ಯಾಯಾಂಗ ಬಂಧನ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರ ( Molakalmuru ) ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನಾವೇ ಈಗ ತೀವ್ರ ಕುತೂಹಲ ಮೂಡಿಸಿದೆ. ಈ ಕ್ಷೇತ್ರದಿಂದ ಗೆದ್ದು ಸಚಿವರಾಗಿರುವಂತ ಬಿ.ಶ್ರೀರಾಮುಲು ಸೋಲಿನ ಭೀತಿಯಲ್ಲಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೊಳಕಾಲ್ಮೂರು ಕ್ಷೇತ್ರವನ್ನು ತೊರೆದು ಬೇರೆ ಕ್ಷೇತ್ರದಿಂದ ಸ್ಪರ್ಧಿಸೋದಕ್ಕೆ ಕ್ಷೇತ್ರ ಹುಟುಕಾಟದಲ್ಲಿಯೂ ತೊಡಗಿದ್ದಾರೆ ಎನ್ನಲಾಗಿದೆ.
Karnataka Politics: ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ – ಕಾಂಗ್ರೆಸ್
ಅಂದಹಾಗೇ ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಶ್ರೀರಾಮುಲು ವಿರುದ್ಧ ನಿಂತು ಸೋಲು ಕಂಡಿದ್ದಂತ ಡಾ.ಯೋಗೇಶ್ ಬಾಬು, ಕ್ಷೇತ್ರದ ಜನಾರ್ಶೀರ್ವಾದದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಜನ ಸೇವೆಯೇ ಜನಾರ್ಧನ ಸೇವೆ ಎನ್ನುವಂತೆ ಯಾವುದೇ ಕೆಲಸ ಕಾರ್ಯಗಳಿರಲೇ ಅಲ್ಲಿ ಯೋಗೇಶ್ ಬಾಬು ಹಾಜರಿರುತ್ತಿದ್ದಾರೆ ಎಂಬುದಾಗಿ ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೂ ಸಚಿವ ಶ್ರೀರಾಮುಲು ಮಾತ್ರ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಿಲ್ಲ. ಹಲವು ಅಭಿವೃದ್ಧಿ ಕಾರ್ಯಗಳು ಮೊಳಕಾಲ್ಮೂರು ಕ್ಷೇತ್ರದಲ್ಲಿ ನಡೆಯದೇ ಕುಂಠಿತಗೊಂಡಿವೆ ಎಂಬುದಾಗಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.
BIGG NEWS ; ನಿರುದ್ಯೋಗ, ಭ್ರಷ್ಟಾಚಾರ ಕುರಿತು ನಗರ ಭಾರತೀಯರು ಹೆಚ್ಚು ಚಿಂತಿತರಾಗಿದ್ದಾರೆ ; ಸಮೀಕ್ಷೆ
ಕಾಂಗ್ರೆಸ್ ಪಕ್ಷದಿಂದ ಸ್ಥಳೀಯ ಯುವ ನಾಯಕ ಡಾ.ಯೋಗೇಶ್ ಬಾಬುಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಕಾರಣ ಉದಯಪುರದಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡದೇ, ಯುವಕರಿಗೆ ಪಕ್ಷದಿಂದ ಟಿಕೆಟ್ ನೀಡುವ ನಿಲುವು ತಳೆದಿರುವುದೇ ಆಗಿದೆ ಎನ್ನಲಾಗುತ್ತಿದೆ.
BIG BREAKING NEWS: ಬಸವಲಿಂಗಸ್ವಾಮೀಜಿ ವಿರುದ್ಧ ಷಡ್ಯಂತ್ರ ಆರೋಪ: ಮೃತ್ಯುಂಜಯ ಶ್ರೀಗೆ 14 ದಿನ ನ್ಯಾಯಾಂಗ ಬಂಧನ
ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಚಿವ ಬಿ.ಶ್ರೀರಾಮುಲು ವರ್ಸಸ್ ಕಾಂಗ್ರೆಸ್ ಸ್ಥಳೀಯ ಯುವ ನಾಯಕ ಡಾ.ಯೋಗೇಶ್ ಬಾಬು ನಡುವೆ ಮತ್ತೆ ಮುಂಬರುವ ಚುನಾವಣೆಯಲ್ಲಿ ತೀವ್ರ ಹಣಾಹಣಿ ಏರ್ಪಡಲಿದ್ದು, ಗೆಲುವಿನ ಸರಮಾಲೆಯನ್ನು ಕ್ಷೇತ್ರದ ಮತದಾರರು ಯಾರಿಗೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.