ಮೈಸೂರು: ಮಾಜಿ ಸಿಎಂ ಸಿದ್ಧರಾಮಯ್ಯ ಆಟ ರಾಜ್ಯದಲ್ಲಿ ನಡೆಯೋದಿಲ್ಲ. ಅರ್ಕಾವತಿ ಬಡಾವಣೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆಗ ಸಿದ್ಧರಾಮಯ್ಯ ಎಲ್ಲಿರುತ್ತಾರೆ ನೋಡಿ. ಮುಂದಿನ ಚುನಾವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಆಡಳಿತದ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಒಂದೇ ಒಂದು ದಿನ ಸಿದ್ಧರಾಮಯ್ಯ ಕಣ್ಣಿನಲ್ಲಿ ನೀರು ಬರಲೇ ಇಲ್ಲ. ಸಿದ್ಧರಾಮಯ್ಯ ನರ ಹಂತಕ ವೀರಪ್ಪನ್ ಎಂಬುದನ್ನು ನಾವು ಕೇಳಿದ್ದೇವೆ. ಆದ್ರೇ ನರಹಂತಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಿದ್ದರು ಎಂದು ಗುಡುಗಿದರು.
BREAKING NEWS : ವಿದೇಶಕ್ಕೆ ತೆರಳಲು ಮಾಜಿ ಸಚಿವ ರೋಷನ್ ಬೇಗ್ ಗೆ ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್ |Roshan baig
ಬಿಜೆಪಿ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತರು ಇದ್ದರು. ಸಿದ್ಧರಾಮಯ್ಯ ಸರ್ಕಾರವಿದ್ದಾಗ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಬೊಮ್ಮಾಯಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದೆ. ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ.? ಕುರುಬ ಸಮುದಾಯಕ್ಕೆ ಮೋಸ ಮಾಡಿದ್ದು ಸಿದ್ಧರಾಮಯ್ಯ ಎಂದು ವಾಗ್ಧಾಳಿ ನಡೆಸಿದರು.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶೀಘ್ರವೇ ವಿದ್ಯಾರ್ಥಿ ನಿಲಯ ಕಾಮಗಾರಿ ಆರಂಭ – ಸಿಎಂ ಬೊಮ್ಮಾಯಿ
ಈಗ ಸಿದ್ಧರಾಮಯ್ಯ ಕ್ಷೇತ್ರ ಹುಡುಟಾಟದ ಕೆಲಸ ಮಾಡುತ್ತಿದ್ದಾರೆ. ಆದ್ರೇ ಮುಂದಿನ ಚುನಾವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತದೆ. ಅರ್ಕಾವತಿ ಬಡಾವಣೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆಗ ಸಿದ್ಧರಾಮಯ್ಯ ಎಲ್ಲಿರುತ್ತಾರೆ ನೋಡಿ ಎಂದು ಹೇಳಿದರು.