ಕಲಬುರಗಿ: ತಳವಾರ ಮತ್ತು ಪರಿವಾರ ನಾಯಕ ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ಕೈ ಬಿಟ್ಟು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಐತಿಹಾಸಿಕ ಹಾಗೂ ಹಲವು ದಶಕಗಳ ಬೇಡಿಕೆ ಸಾಕಾರಗೊಂಡಂತಾಗಿದೆ ಎಂದು ಬಿಜೆಪಿ ರಾಜ್ಯವಕ್ತಾರರು ವಿಭಾಗೀಯ ಪ್ರಭಾರಿ ಆಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರ: ಕಾನೂನು ತಜ್ಞರ ಮೊರೆ ಹೋಗ ರಾಜ್ಯ ಸರ್ಕಾರ
ಚುನಾವಣಾ ಸಂದರ್ಭದಲ್ಲಿ ತಳವಾರ ಹಾಗೂ ಹಾಗೂ ಪರಿವಾರ ನಾಯಕ ಜಾತಿಗಳನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಈಗ ನೀಡಲಾಗಿರುವ ಭರವಸೆ ಸಾಕಾರಗೊಳಿಸುವ ಮುಖಾಂತರ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ನಿರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ತಳವಾರ ಹಾಗೂ ಪರಿಹಾರ ನಾಯಕ ಜಾತಿಗಳ ನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಬೇಕೆಂದು ಜನಾಂಗದವರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶೀಘ್ರವೇ ವಿದ್ಯಾರ್ಥಿ ನಿಲಯ ಕಾಮಗಾರಿ ಆರಂಭ – ಸಿಎಂ ಬೊಮ್ಮಾಯಿ
ಈಗ ಅವರಿಗೆ ಸ್ಪಂದಿಸುವ ಮುಖಾಂತರ ಸರ್ಕಾರ ಹಿಂದುಳಿದ ವರ್ಗಗಳ ಮೇಲೆತ್ತುವ ಕೆಲಸ ಮಾಡಿದೆ. ಪ್ರಮುಖವಾಗಿ ಕಲಬುರಗಿಯಲ್ಲಿ ನಡೆಯುವ ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ ಸಮಾವೇಶ ಮುಂಚಿತವಾಗಿ ತಳವಾರ ಹಾಗೂ ಪರಿವಾರ ನಾಯಕ ಜಾತಿಗಳನ್ನು ಪರಿಶಿಷ್ಟ ಪಂಗಡ ಸೇರಿಸುವ ಮುಖಾಂತರ ಸರ್ಕಾರ ದೊಡ್ಡ ಕೊಡುಗೆ ನೀಡಿದೆ ಎಂದಿದ್ದಾರೆ.
ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸುವರಿಗೆ ಇದು ಉತ್ತರ ವಾಗಿದೆ. ಈ ಹಿಂದೆ ಅಧಿಕಾರ ನಡೆಸಿದ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಬರೀ ಬಣ್ಣದ ಮಾತುಗಳನ್ನಾಡಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಜನರಲ್ಲಿ ಬೆಳಕು ಮೂಡಿಸಿದೆ. ಹೀಗಾಗಿ ಬಿಜೆಪಿ ಸರ್ಕಾರ ಸರ್ವರ ಹಿತ ಕಾಯುವ ಹಾಗೂ ತುಳಿತಕ್ಕೊಳಗಾದ ಜನರನ್ನು ಕೈ ಹಿಡಿದು ಮೇಲೆತ್ತುವುದನ್ನು ಪುನರ್ ನಿರ್ಮಿಸಿದೆ ಎಂದು ತೇಲ್ಕೂರ ವಿವರಣೆ ನೀಡಿದ್ದಾರೆ.
BREAKING NEWS : ವಿದೇಶಕ್ಕೆ ತೆರಳಲು ಮಾಜಿ ಸಚಿವ ರೋಷನ್ ಬೇಗ್ ಗೆ ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್ |Roshan baig
ಹಿಂದುಳಿದ ವರ್ಗಗಳ ವಿರಾಟ ಸಮಾವೇಶ ನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಆದೇಶ ಹೊರಡಿಸಿರುವುದಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರುವಲ್ಲಿ ಆಸಕ್ತಿ ತೋರಿ ಕಾರ್ಯರೂಪಕ್ಕೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಪುಟದ ಸರ್ವ ಸದಸ್ಯರಿಗೆ ರಾಜಕುಮಾರ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.