ದೆಹಲಿ : ಅಪಘಾತದಲ್ಲಿ ಗಾಯಗೊಂಡು ಕಳೆದ ಏಳು ತಿಂಗಳುಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಹಿಳೆಯೊಬ್ಬಳು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಅಪರೂಪದ ಘಟನೆ ದೆಹಲಿಯ ಏಮ್ಸ್’ನಲ್ಲಿ ನಡೆದಿದೆ.
ಅಂದ್ಹಾಗೆ, ಉತ್ತರ ಪ್ರದೇಶದ ಬುಲಂದ್ಶಹರ್ನ ಮಹಿಳೆಯೊಬ್ಬರು ಈ ವರ್ಷ ಮಾರ್ಚ್ 31ರಂದು ತನ್ನ ಪತಿಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೊಳಗಾಗಿದ್ದರು. ಆ ವೇಳೆ ಹೆಲ್ಮೆಟ್ ಧರಿಸದೇ ಇದ್ದ ಕಾರಣ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಈ ಕಾರಣದಿಂದಾಗಿ, ಆಕೆ ಹಲವಾರು ತಲೆಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪ್ರಾಣಪಾಯದಿಂದ ಪಾರಾದ್ರೂ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಈ ಮಹಿಳೆ ಕಣ್ಣು ತೆರೆದಿದ್ದಾಳಾದ್ರೂ, ಚಲನರಹಿತಳಾಗಿದ್ದಾಳೆ. ಇನ್ನು ಅಪಘಾತದ ವೇಳೆಗಾಗ್ಲೇ 40 ದಿನಗಳ ಆಕೆ ಗರ್ಭಿಣಿಯಾಗಿದ್ದು, ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ವೈದ್ಯರು ತಿಳಿಸಿದ್ದಾರೆ.
ಎಪ್ರಿಲ್ 1ರ ಮುಂಜಾನೆ ಮಹಿಳೆ ಗಂಭೀರ ಸ್ಥಿತಿಯಲ್ಲಿ ದೆಹಲಿ ಏಮ್ಸ್ಗೆ ಬಂದಿದ್ದಾರೆ ಎಂದು ಏಮ್ಸ್ ನರಶಸ್ತ್ರಚಿಕಿತ್ಸಕ ಡಾ.ದೀಪಕ್ ಗುಪ್ತಾ ಹೇಳಿದ್ದಾರೆ. ಅಪಘಾತದ ವೇಳೆ ಆಕೆ 40 ದಿನಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಹೊಟ್ಟೆಯಲ್ಲಿರುವ ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದ್ದರಿಂದ ಗರ್ಭಪಾತಕ್ಕೆ ಕುಟುಂಬಸ್ಥರು ಒಪ್ಪಿರಲಿಲ್ಲ. ಇತ್ತೀಚೆಗಷ್ಟೇ ತಿಂಗಳು ಪೂರ್ಣಗೊಂಡ ಬಳಿಕ ಹೆರಿಗೆಯಾಗಿದೆ ಎಂದು ವಿವರಿಸಲಾಗಿದೆ. ಸದ್ಯ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹಾಲುಣಿಸುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ತಿಳಿಸಿದರು.
‘ಅಪ್ಪು’ ಪುಣ್ಯಸ್ಮರಣೆ ದಿನ ರಾಜ್ಯದ ಹಲವೆಡೆ ಅನ್ನದಾನ : ಬಿರಿಯಾನಿ ಹಂಚಿದ ‘ಪುನೀತ್’ ಫ್ಯಾನ್ಸ್ |Puneeth Rajkumar
ನಳಿನ್ ಕುಮಾರ್ ಕಟೀಲ್ ಜೋಕರ್, ಅವರಿಗೆ ಉತ್ತರ ಕೊಟ್ಟು ಟೈಮ್ ವೇಸ್ಟ್ ಮಾಡಲ್ಲ : ಸಿದ್ದರಾಮಯ್ಯ