ಬೆಂಗಳೂರು: ಮೀಸಲಾತಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. OBC ಮೀಸಲಾತಿಗೆ ಒತ್ತಾಯಿಸಿ ಒಕ್ಕಲಿಗರು ಮುಂದಾಗಿದ್ದಾರೆ.
ಈ ಬಗ್ಗೆ ಇಂದು ಮಂಡ್ಯದ ಮದ್ದೂರಿನಲ್ಲಿ ಒಕ್ಕಲಿಗರ ಮೀಸಲಾತಿ ಹೋರಾಟದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಶ್ರೀ ನಮಗೆ ರಾಮ-ಕೃಷ್ಣರಂತೆ ಬದುಕುವುದು ಗೊತ್ತು ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶೈಕ್ಷಣಿಕ, ಉದ್ಯೋಗಿಕವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. 3ಎ ಮೀಸಲಾತಿ 4% ರಿಂದ 12% ಹೆಚ್ಚಿಸಿ. ನಗರಪ್ರದೇಶದಲ್ಲಿರುವ ಒಕ್ಕಲಿಗರಿಗೆ OBC ಮೀಸಲಾತಿ ನೀಡಬೇಕು ಅಂತ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.