ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ ಅವರು ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾಅವರಿಗೆ ಮದ್ಯಪಾನ ಮಾಡುತ್ತೀರಾ ಎಂದು ಕೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
अतिवृष्टी पाहणी दौरा कि मद्यसृष्टी पाहणी दौरा?
गम का दौर हो या हो खुशी, समा बाँधती है शराब
किसान मरे या करे खुदकुशी, समा बाँधती है शराब
एक मशवरा है जनाब के थोड़ी-थोड़ी पिया करो
हुई महँगी बहत ही शराब, के थोड़ी-थोड़ी पिया करो 🤔 pic.twitter.com/UDZsfypmAO— Sachin Sawant सचिन सावंत (@sachin_inc) October 27, 2022
ಮಧ್ಯ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪ್ರವಾಸದಲ್ಲಿರುವಾಗ ಅಬ್ದುಲ್ ಸತ್ತಾರ್ ಅವರೊಂದಿಗೆ ಅಕ್ಟೋಬರ್ 21 ರಂದು ಜಿಲ್ಲೆಯ ಗೆವ್ರಾಯಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಲು ರಾಧಾಬಿನೋದ್ ಶರ್ಮಾ ಬಂದಿದ್ದರು. ಈ ವೇಳೆ ಚಹಾ ನೀಡಲು ಬಂದಾಗ ನಿರಾಕರಿಸಿದ್ದಕ್ಕೆ ರಾಧಾಬಿನೋದ್ ಶರ್ಮಾ ಮದ್ಯ ಸೇವಿಸುತ್ತೀರಾ ಎಂದು ಅಬ್ದುಲ್ ಸತ್ತಾರ್ ಅಣಕಿಸಿದ್ದಾರೆ.
ಇದೀಗ ಈ ವೀಡಿಯೋ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಅಬ್ದುಲ್ ಸತ್ತಾರ್, ರಾಧಾಬಿನೋದ್ ಶರ್ಮಾ ಮತ್ತು ಇನ್ನೂ ಕೆಲವರು ಕುಳಿತುರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋ ಕುರಿತಂತೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ , ಸತ್ತಾರ್ ಅವರದ್ದು ಮಳೆ ಹಾನಿ ಪರಿಶೀಲನೆ ಪ್ರವಾಸವೋ ಅಥವಾ ಮದ್ಯ ಸೇವಿಸಲು ಹೋಗಿರುವ ಪ್ರವಾಸವೋ ಎಂದು ಟ್ವೀಟ್ ಮಾಡಿದ್ದಾರೆ.