ಕಲಬುರಗಿ: ಬಿಜೆಪಿ ವತಿಯಿಂದ ಇದೇ ತಿಂಗಳು 30ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಓಬಿಸಿ ಸಮಾವೇಶ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಇಂದು ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಅವರ ತತ್ವ ಸಿದ್ಧಾಂತವೇ ಬೇರೆ ನಮ್ಮ ತತ್ವ ಸಿದ್ಧಾಂತವೇ ಬೇರೆ ಇದೆ. ಈ ಹಿಂದೆಯೂ ಅವರು ಹಲವು ಹುದ್ದೆಗಳು ಅಲಂಕರಿಸಿದ್ದರು. ಆದರೂ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ರಾಜ್ಯದ ಮೇಲೆ ಝೀರೋ ಎಫೆಕ್ಟ್ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನ ಭಾರತ ಜೋಡೋ ಪಾದಯಾತ್ರೆ ಯಿಂದ ಯಾವ ಪ್ರಯೋಜನ ಆಗಿಲ್ಲ. ಕಾಂಗ್ರೆಸ್ ನಡಿಗೆ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಆಗಿದೆ ಎಂದು ವ್ಯಂಗ್ಯವಾಡಿದರು.ಇದೇ ವೇಳೆ, ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಸಿ, ನಮ್ಮ ಸರ್ಕಾರ ಎಲ್ಲಾ ವರ್ಗದ ಜನರ ಜೊತೆ ಇರುತ್ತದೆ. ನಮ್ಮ ಎದುರಿಗೆ ಈಗ ಮುಖ್ಯವಾಗಿರುವುದು ಸರ್ಕಾರದ ಸಾಧನೆ ಜನರಿಗೆ ತಲುಪಿಸುವುದು ಎಂದು ಹೇಳಿದರು.