ಚಾಮರಾಜನಗರ: ಪರಿಶಿಷ್ಟ ಜಾತಿ ಹಾಗೂ ಪ. ಪಂಗಡಗಳ ಸಮುದಾಯಗಳ ಮೀಸಲಾತಿ ಹೆಚ್ಚಿಸಿದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ನ. 20 ರಂದು ಬಳ್ಳಾರಿಯಲ್ಲಿ ಬೃಹತ್ ಎಸ್ಟಿ ಸಮಾವೇಶ ಆಯೋಡಿಸಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
BIGG NEWS: ಸಿದ್ದರಾಮಯ್ಯ ಗೆ ಕೋಲಾರದಿಂದ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಾಯ
ನಗರದ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಜರಗಿದ ಬಿಜೆಪಿ ಎಸ್ಟಿ ಸಮಾವೇಶ ಕುರಿತು ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳವಾಗಿರಲಿಲ್ಲ. ನಾನು ಚುನಾವಣ ಪೂರ್ವದಲ್ಲೇ ಬಿಜೆಪಿ ಸರಕಾರ ಬಂದರೆ ಮೀಸಲಾತಿ ಹೆಚ್ಚಿಸುವ ವಾಗ್ಧಾನ ಮಾಡಿದ್ದೆ ಎಂದರು.
BIGG NEWS: ಸಿದ್ದರಾಮಯ್ಯ ಗೆ ಕೋಲಾರದಿಂದ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಾಯ
ಕುಲ ಶಾಸ್ತ್ರ ಅಧ್ಯಯನ: ಯಾವುದೇ ಸಮುದಾಯವನ್ನು ಮೀಸಲಾತಿಗೆ ಸೇರಿಸಲು ನಮ್ಮ ಅಭ್ಯಂತರವಿಲ್ಲ. ಮೀಸಲಾತಿ ಅನುಷ್ಠಾನಕ್ಕೂ ಮುನ್ನ ಸಂಬಂಧಪಟ್ಟ ಜಾತಿಯ ಕುಲ ಶಾಸ್ತ್ರ ಅಧ್ಯಯನ ನಡೆಯಬೇಕು ಎಂದು ಸಾರಿಗೆ ಸಚಿವ ಬಿ.ಶ್ರೀ ರಾ ಮುಲು ಅವರು ಮೈಸೂರಿನಲ್ಲಿ ಹೇಳಿ ದರು. ಮೀಸಲಾತಿ ಅನುಷ್ಠಾನಕ್ಕಾಗಿ ಸಮಿತಿ ರಚಿಸಬೇಕು. ಅದು ನೀಡುವ ವರದಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಬೇಕು. ಏಕಾಏಕಿ ಮೀಸಲಾತಿ ಅನುಷ್ಠಾನ ಹೆಚ್ಚಳ ಸಾಧ್ಯವಿಲ್ಲ ಎಂದರು.
BIGG NEWS: ಸಿದ್ದರಾಮಯ್ಯ ಗೆ ಕೋಲಾರದಿಂದ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಾಯ