ಮುಂಬೈ: ವಿವಾಹಿತ ಮಹಿಳೆಗೆ(ಪತ್ನಿ) ಮನೆಕೆಲಸ ಮಾಡುವಂತೆ ಹೇಳುವುದು ಕ್ರೌರ್ಯವಲ್ಲ ಎಂದು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ ಮಹಿಳೆಯ ಆರೋಪವನ್ನು ತಳ್ಳಿಹಾಕಿದ್ದು, ಪತಿ ವಿರುದ್ಧದ ಎಫ್ಐಆರ್ಅನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ್ ಪಾಟೀಲ್ ಅವರ ವಿಭಾಗೀಯ ಪೀಠ, ಅಕ್ಟೋಬರ್ 21 ರಂದು, ವ್ಯಕ್ತಿ ಮತ್ತು ಅವನ ಪೋಷಕರ ವಿರುದ್ಧ ದಾಖಲಿಸಲಾದ ಎಫ್ಐಆರ್ಅನ್ನು ರದ್ದುಗೊಳಿಸಿತು.
ಮದುವೆಯಾದ ಒಂದು ತಿಂಗಳ ಕಾಲ ನನ್ನನ್ನು ಮನೆಯವರೆಲ್ಲರೂ ಚೆನ್ನಾಗಿ ನೋಡಿಕೊಂಡರು. ನಂತ್ರ ಮನೆಯವರೆಲ್ಲರೂ ನನ್ನನ್ನು ಮನೆಕೆಲಸದವರಂತೆ ಕಾಣುತ್ತಿದ್ದರು. ನನ್ನನ್ನು ʻಸೇವಕಿʼ ಎಂಬಂತೆ ಭಾವಿಸುತ್ತಿದ್ದರು. ಪತಿ ಮನೆಯವರು ಕಾರು ಖರೀದಿಸಲು ₹ 4 ಲಕ್ಷಕ್ಕೆ ಕೊಡುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಳು.
ಮಹಿಳೆ ತನಗೆ ಕಿರುಕುಳ ನೀಡಿರುವುದಾಗಿ ಹೇಳಿದ್ದಾಳೆ. ಆದರೆ ತನ್ನ ದೂರಿನಲ್ಲಿ ಅಂತಹ ಯಾವುದೇ ಕೃತ್ಯವನ್ನು ನಿರ್ದಿಷ್ಟಪಡಿಸಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಗಮನಿಸಿದೆ. “ಮದುವೆಯಾದ ಹೆಂಗಸನ್ನು ಕುಟುಂಬಕ್ಕಾಗಿ ಮನೆಕೆಲಸ ಮಾಡಲು ಕೇಳಿದರೆ, ಅದನ್ನು ಸೇವಕಿಯಂತೆ ಎಂದು ಹೇಳಲಾಗುವುದಿಲ್ಲ. ಮನೆ ಕೆಲಸ ಮಾಡಲು ಇಷ್ಟವಿಲ್ಲದಿದ್ರೆ, ಮದುವೆಗೂ ಮೊದಲೇ ಈ ವಿಷಯ ತಿಳಿಸಬೇಕಿತ್ತು. ಆಗ ಮದುವೆಯ ಬಗ್ಗೆ ಆತನ ಮನೆಯವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಕೆಲಸ ಮಾಡು ಅಂತಾ ಹೇಳುವುದನ್ನು ಮಾನಸಿಕ, ದೈಹಿಕ ದೌರ್ಜನ್ಯ ಎಂದು ಹೇಳಲಾಗದು. ಯಾವ ರೀತಿಯ ದೌರ್ಜನ್ಯ ನಡೆದಿದೆ ಎಂದು ವಿವರಿಸಬೇಕು. ವಿವರಿಸದಿದ್ರೆ, ಅದನ್ನು ಪತಿ ನಡೆಸಿದ ದೌರ್ಜನ್ಯ ಎಂದು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲʼ ಎಂದು ನ್ಯಾಯಾಲಯ ಹೇಳಿದೆ.
BIGG NEWS : ಸುರತ್ಕಲ್ ಟೋಲ್ ಗೇಟ್ ವಿರುದ್ಧ ನಾಳೆಯಿಂದ ಪ್ರತಿಭಟನೆ : 144 ಸೆಕ್ಷನ್ ನಿಷೇಧಾಜ್ಞೆ ಜಾರಿ
BIGG NEWS: ಸಿದ್ದರಾಮಯ್ಯ ಗೆ ಕೋಲಾರದಿಂದ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಾಯ
BIGG NEWS: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಬಿಗ್ ಟ್ವಿಸ್ಟ್; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ
BIGG NEWS : ಸುರತ್ಕಲ್ ಟೋಲ್ ಗೇಟ್ ವಿರುದ್ಧ ನಾಳೆಯಿಂದ ಪ್ರತಿಭಟನೆ : 144 ಸೆಕ್ಷನ್ ನಿಷೇಧಾಜ್ಞೆ ಜಾರಿ
BIGG NEWS: ಸಿದ್ದರಾಮಯ್ಯ ಗೆ ಕೋಲಾರದಿಂದ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಾಯ