ಸ್ಯಾನ್ ಫ್ರಾನ್ಸಿಸ್ಕೋ: ಎಲಾನ್ ಮಸ್ಕ್ ಅವರು ಟ್ವಿಟರ್ ಮೇಲೆ ನಿಯಂತ್ರಣ ಸಾಧಿಸಿದ್ದು, ಈ ವೇಳೆಯಲ್ಲಿ ಅವರು ಉನ್ನತ ಕಾರ್ಯನಿರ್ವಾಹಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಯುಎಸ್ ಮಾಧ್ಯಮ ಗುರುವಾರ ತಡರಾತ್ರಿ ವರದಿ ಮಾಡಿದೆ.
ಇದೇ ವೇಳೆ ಮಸ್ಕ್ ಗುರುವಾರ ಟ್ವೀಟ್ ಮಾಡಿದ್ದು, “ನಾಗರಿಕತೆಯ ಭವಿಷ್ಯಕ್ಕೆ ಸಾಮಾನ್ಯ ಡಿಜಿಟಲ್ ಟೌನ್ ಚೌಕವನ್ನು ಹೊಂದುವುದು ಮುಖ್ಯವಾಗಿದೆ, ಇಲ್ಲಿ ವ್ಯಾಪಕ ಶ್ರೇಣಿಯಲ್ಲಿ ನಂಬಿಕೆಗಳನ್ನು ಆರೋಗ್ಯಕರ ರೀತಿಯಲ್ಲಿ ಚರ್ಚಿಸಬಹುದು” ಎಂದು ಹೇಳಿದ್ದಾರೆ.