ತಮಿಳುನಾಡು: ಅಕ್ಟೋಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಫ್ಐಆರ್ ದಾಖಲಿಸುವ ಮೂಲಕ ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ.
BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್ ಕತ್ತರಿಗೆ ಒಪ್ಪಿಗೆ
ಅಕ್ಟೋಬರ್ 23 ರಂದು ಮುಂಜಾನೆ 4.30 ರ ಸುಮಾರಿಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾರುತಿ 800 ಕಾರಿನೊಳಗೆ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡಿತ್ತು. ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಸ್ಫೋಟ ಸಂಭವಿಸಿದ್ದು, ಜಮೇಜಾ ಮುಬಿನ್ (25)ಎಂದು ಗುರುತಿಸಲಾದ ವ್ಯಕ್ತಿ ಸಜೀವ ದಹನಗೊಂಡಿದ್ದರು.
ಸಾಮಾನ್ಯವಾಗಿ ಭಯೋತ್ಪಾದಕ ದಾಳಿಗಳಲ್ಲಿ ಸ್ಫೋಟಕ್ಕೆ ಬಳಸುವ ಮೊಳೆಗಳು, ಮಾರ್ಬಲ್ಗಳು ಮತ್ತು ಇತರ ವಸ್ತುಗಳು ಕಾರಿನಲ್ಲಿ ಪತ್ತೆಯಾಗಿವೆ. ಮುಬಿನ್ ಅವರ ಮನೆಯಲ್ಲಿ ಕಡಿಮೆ-ತೀವ್ರ ಸ್ಫೋಟಕಗಳಾದ ಪೊಟ್ಯಾಸಿಯಮ್ ನೈಟ್ರೇಟ್, ಅಲ್ಯೂಮಿನಿಯಂ ಪುಡಿ, ಇದ್ದಿಲು, ಗಂಧಕ ಕಚ್ಚಾ ಬಾಂಬ್ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ರಾಜ್ಯ ಡಿಜಿಪಿ ಸೈಲೇಂದ್ರ ಬಾಬು ಬಹಿರಂಗಪಡಿಸಿದ್ದಾರೆ.
ಕೆಲವು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಪೊಲೀಸರು ಐವರನ್ನು ಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಕೆಲವರು ಈ ಹಿಂದೆ ಕೇರಳಕ್ಕೆ ಭೇಟಿ ನೀಡಿದ್ದರು. 2019 ರಲ್ಲಿ ಅವರನ್ನು ಎನ್ಐಎ ವಿಚಾರಣೆ ನಡೆಸಿತ್ತು ಎಂದು ಕೊಯಮತ್ತೂರು ಕಮಿಷನರ್ ಬಾಲಕೃಷ್ಣನ್ ಹೇಳಿದ್ದಾರೆ.
ಈ ವಿಚಾರವಾಗಿ ತಮಿಳುನಾಡು ಬಿಜೆಪಿ ಆಡಳಿತಾರೂಢ ಡಿಎಂಕೆ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಘಟನೆಯನ್ನು ಪೊಲೀಸರು ಆತ್ಮಹತ್ಯಾ ದಾಳಿ ಎಂದು ಪರಿಗಣಿಸಬೇಕಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಹೇಳಿದ್ದಾರೆ.
ಈ ಕುರಿತು ಗೃಹ ಸಚಿವ ಅಮಿತ್ ಶಾ ಅವರಿಗೆ ಟಿಎನ್ಬಿಜೆಪಿ ಪತ್ರ ಬರೆದಿದ್ದು, ಈ ಬಗ್ಗೆ ಎನ್ಐಎ ತನಿಖೆಗೆ ಕೋರಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.
BIGG NEWS : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಪೋಸ್ ಸೆರೆಹಿಡಿದ C.M ಬೊಮ್ಮಾಯಿ | Basavaraj Bommai