ಬೆಂಗಳೂರು: ರಾಜಧಾನಿಯ ರಸ್ತೆಗಳ ಗುಂಡಿಮಯವಾಗಿವೆ. ಅದರ ರಿಪೇರಿ ಉಸಾಬರಿಗೆ ಬಿಬಿಎಂಪಿ ಎಂದಿನಂತೆ ನಿರ್ಲಕ್ಷ್ಯ ತೋರಿದೆ. ಹಾಗಾಗಿ ಉತ್ತರದಾಯಿತ್ವ ಕಾಯ್ದುಕೊಳ್ಳಲು ರಸ್ತೆಗಳಲ್ಲಿ ಗುಂಡಿ ಕಂಡುಬಂದರೆ ಬಿಬಿಎಂಪಿ ಇಂಜಿನಿಯರ್ ಗೆ ದಂಡ ಹಾಕಿ ಎಂದು ಸಾರ್ವಜನಿಕರಿಂದ ಭಾರೀ ಬೇಡಿಕೆ ಬಂದಿದೆ.
ವಾಹನ ಸವಾರರು ಹೆಲ್ಮೆಟ್ ಹಾಕದೇ ಹೋದ್ರೆ ಪೊಲೀಸ್ರು ಫೈನ್ ಹಾಕ್ತಾರೆ. ಕಾರು ಚಾಲಕರು ಸೀಟ್ ಬೆಲ್ಟ್ ಹಾಕ್ದೆ ಹೋದ್ರೆ ಫೈನ್ ಹಾಕ್ತಾರೆ. ಹಾಗೆಯೇ… ರಸ್ತೆಯಲ್ಲಿ ಗುಂಡಿ ಇದ್ರೆ ರಸ್ತೆಗೆ ಸಂಬಂಧಿಸಿದಂತೆ ಇಂಜಿನಿಯರ್ ಗೆ ಫೈನ್ ಹಾಕಬೇಕು. ಒಂದು ಗುಂಡಿಗೆ ಇಂತಿಷ್ಟು ಅಂತಾ ಫೈನ್ ಫಿಕ್ಸ್ ಮಾಡಿ. ವಾಹನ ಸವಾರರು ಫೈನ್ ಹೆದರಿಕೆಗೆ ರೂಲ್ಸ್ ಫಾಲೋ ಮಾಡ್ತಾರೆ. ಹಾಗೇ ಇಂಜಿನಿಯರ್ ಗಳು ರಸ್ತೆ ಗುಂಡಿ ಮುಚ್ಚುತ್ತಾರೆ ಎಂದು ಸಾರ್ವಜನಿಕರಿಂದ ಸರ್ಕಾರಕ್ಕೆ ಒತ್ತಾಯ ಕೇಳಿಬಂದಿದೆ.
ನಗರದಲ್ಲಿ ರಸ್ತೆ ಗುಂಡಿಗಳಿಗೆ ಸುಸ್ತಾಗಿರುವ ಬೆಂಗಳೂರು ಮಂದಿ ಅದರ ಕಷ್ಟನಷ್ಟಗಳಿಂದ ರೋಸಿಹೋಗಿದ್ದಾರೆ. ಕಳೆದ ಎರಡು ವರ್ಷದಲ್ಲಿ 14 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ರಸ್ತೆ ಗುಂಡಿಗೆ ಬಲಿಯಾದವರ ಪಟ್ಟಿ ಹೀಗಿದೆ:
2021 ರ ಫೆಬ್ರವರಿ 2 ರಂದು ಪುಲಕೇಶಿ ನಗರದಲ್ಲಿ ತಸ್ ದೀಕ್ ಬುಷ್ರಾ(19), 2021 ವೈಟ್ ಫೀಲ್ಡ್ ನಲ್ಲಿ ಶ್ರೀದೇವಿ ಕೆ.ಪಿಳ್ಯೆ (51), 2021 ಬಾಣಸವಾಡಿಯಲ್ಲಿ ಅಜೀಂ ಅಹ್ಮದ್ (21), 2021 ಕಾಮಾಕ್ಷಿಪಾಳ್ಯದಲ್ಲಿ ಋರ್ಷಿದ್ (65), 2021 ರಲ್ಲಿ ಪೀಣ್ಯದಲ್ಲಿ ಆನಂದಪ್ಪ, 2021 ರ ಡಿ. 2 ರಂದು ಆರ್ ಟಿ ನಗರದಲ್ಲಿ ಮಂಜುನಾಥ್, 2021 ರ ಅಕ್ಟೋಬರ್ 12 ರಂದು ಯಲಹಂಕದಲ್ಲಿ ಗಾಯತ್ರಿ (37), 2022 ಜ. 30 ರಂದು ಬ್ಯಾಟರಹಳ್ಳಿ ಮುಖ್ಯ ರಸ್ತೆಯಲ್ಲಿ ಶರ್ಮಿಳಾ, ಮಾ. 12 ರಂದು ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್ ನಲ್ಲಿ ಅಶ್ವಿನ್ (27), ಅಕ್ಟೋಬರ್11 ರಂದು ಕೆ.ಆರ್. ಪುರಂದಲ್ಲಿ ಜೀವನ್ (10), ಅಕ್ಟೋಬರ್19 ರಂದು ಸುಜಾತಾ ಚಿತ್ರಮಂದಿರದ ಬಳಿ ಉಮಾದೇವಿ, ಅಕ್ಟೋಬರ್ 23 ನೆಲಮಂಗಲದಲ್ಲಿ ತಿಪ್ಪೇಸ್ವಾಮಿ ರಸ್ತೆ ಗುಂಡಿಗೆ ಆಹುತಿಯಾಗಿದ್ದಾರೆ.