ಬೆಂಗಳೂರು: ನಗರದಲ್ಲಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ ಪಡೆಯಬಹುದು!! ಜನತೆ ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ. ವೇದಿಕೆ ಮೇಲೆ ದಮ್ಮು ತಾಕತ್ತಿನ ಸವಾಲು ಹಾಕುವ ಬಸವರಾಜ ಬೊಮ್ಮಾಯಿ ಅವರೇ, ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ದಮ್ಮು ತಾಕತ್ತು ತೋರಬೇಕಲ್ಲವೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರತಿ ಸವಾಲು ಎಸೆದಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ
ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ ಪಡೆಯಬಹುದು!!ಜನತೆ ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ.
ವೇದಿಕೆ ಮೇಲೆ ದಮ್ಮು ತಾಕತ್ತಿನ ಸವಾಲು ಹಾಕುವ @BSBommai ಅವರೇ, ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ದಮ್ಮು ತಾಕತ್ತು ತೋರಬೇಕಲ್ಲವೇ?#SayCM pic.twitter.com/qQEcbQ0Ayx
— Karnataka Congress (@INCKarnataka) October 26, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಮುಂದಾಗಿರುವ ಸರ್ಕಾರ ಈಗಾಗಲೇ ಹೂಡಿಕೆ ಮಾಡಿದವರ ಕೊಡುತ್ತಿರುವ ಉಡುಗೊರೆ – ರಸ್ತೆ ಗುಂಡಿಗಳು. ಪೀಣ್ಯದಲ್ಲಿರುವ ರಸ್ತೆ ಗುಂಡಿಗಳಿಂದ ವಹಿವಾಟಿಗೆ ತೊಂದರೆಯಾಗುತ್ತಿದೆ, ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ಬಸವರಾಜ ಬೊಮ್ಮಾಯಿ ಅವರೇ, ಇದೇನಾ ತಾವು ಹೂಡಿಕೆದಾರರಿಗೆ ನೀಡುವ ಭರವಸೆ, ಸೌಲಭ್ಯಗಳು? ಎಂಬುದಾಗಿ ಪ್ರಶ್ನಿಸಿದೆ.
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಮುಂದಾಗಿರುವ ಸರ್ಕಾರ ಈಗಾಗಲೇ ಹೂಡಿಕೆ ಮಾಡಿದವರ ಕೊಡುತ್ತಿರುವ ಉಡುಗೊರೆ – ರಸ್ತೆ ಗುಂಡಿಗಳು.
ಪೀಣ್ಯದಲ್ಲಿರುವ ರಸ್ತೆ ಗುಂಡಿಗಳಿಂದ ವಹಿವಾಟಿಗೆ ತೊಂದರೆಯಾಗುತ್ತಿದೆ, ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ.@BSBommai ಅವರೇ, ಇದೇನಾ ತಾವು ಹೂಡಿಕೆದಾರರಿಗೆ ನೀಡುವ ಭರವಸೆ, ಸೌಲಭ್ಯಗಳು?#SayCM pic.twitter.com/HybfSMFqF7
— Karnataka Congress (@INCKarnataka) October 26, 2022