ಹಾಸನ: ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಕಿಡಿಕಾರಿದಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi ) ಅವರು, ಅವರಿಗೆ ಪ್ರೀತಿಯಿಂದ ಹೇಳಿದ್ರೇ ಅರ್ಥವಾಗುವುದಿಲ್ಲ. ಒಬ್ಬನಿಗೆ ಬಡಿದ್ರೇ. ಸಾವಿರ ಜನರಿಗೆ ಮೆಸೇಜ್ ಹೋಗಬೇಕು ಆ ರೀತಿ ಮಾಡಬೇಕು ಎಂಬುದಾಗಿ ಹೇಳಿದ್ದಾರೆ.
BIGG NEWS: ಪಟಾಕಿ ತಂದ ಆಪತ್ತು; ಪಟಾಕಿ ಸಿಡಿತದಿಂದ 78 ಮಕ್ಕಳಿಗೆ ಗಾಯ
ನಗರದಲ್ಲಿ ಇಂದು ಹಾಸನಾಂಬೆ ದೇವರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಬಿಜೆಪಿ 150 ಸೀಟಿ ಗೆಲ್ಲುತ್ತದೆ ಎಂಬುದು ಸುಳ್ಳು. ಇಡೀ ದೇಶದಲ್ಲಿ ಎಲ್ಲಾ ಎಂ ಎಲ್ ಎ ಸೇರಿದ್ರೇ ಅಷ್ಟು ಆಗಬಹುದು. ಕರ್ನಾಟಕದಲ್ಲಿ ಅಷ್ಟು ಸೀಟು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದರು.
ಐಫೋನ್ ಬಳಕೆದಾರರೇ ಎಚ್ಚರ ; ‘ಹೆಚ್ಚಿನ ಅಪಾಯ’ದ ಎಚ್ಚರಿಕೆ ನೀಡಿದೆ ಸರ್ಕಾರ ; ಏನು ಮಾಡ್ಬೇಕು.? ಇಲ್ಲಿದೆ ಮಾಹಿತಿ
ಶಿವಮೊಗ್ಗದಲ್ಲಿ ಶಾಂತಿ ಕದಡುವ ಪ್ರಯತ್ನದ ಬಗ್ಗೆ ಮಾತನಾಡಿದಂತ ಅವರು, ನೋಡಿ ಮತ್ತೆ ಮತ್ತೆ ಶಾಂತಿಯನ್ನು ಕದಡುವಂತ ಪ್ರಯತ್ನ ಮಾಡುವವರಿಗೆ ನಾವು ಪ್ರೀತಿಯಿಂದ ಹೇಳಿದರೇ ಬಗ್ಗುವುದಿಲ್ಲ. ಅವರನ್ನು ಬಗ್ಗಿಸಬೇಕಾದ ರೀತಿ ಬೇರೆಯೇ ಇದೆ. ಆ ರೀತಿಯಿಂದಲೇ ಬಗ್ಗಿಸಬೇಕು. ಒಬ್ಬನಿಗೆ ಬಡಿದರೇ, ಸಾವಿರ ಜನರಿಗೆ ಮೆಸೇಜ್ ಹೋಗಬೇಕು. ಆ ತರಾನೇ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ‘ಆಶಾ ಕಾರ್ಯಕರ್ತೆ’ಯರಿಗೆ ದೀಪಾವಳಿ ಗಿಫ್ಟ್: ‘1 ಸಾವಿರ ಗೌರವಧನ’ ಹೆಚ್ಚಳ, ಅನುದಾನ ಬಿಡುಗಡೆ