ಬೆಂಗಳೂರು: ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ( Asha Worker ) ಏಪ್ರಿಲ್ 2022ರಿಂದ ಗೌರವಧನವನ್ನು ರೂ.1000ಕ್ಕೆ ಹೆಚ್ಚಿಸಲಾಗಿತ್ತು. ಈ ಗೌರವಧನ ಸೇರಿದಂತೆ ಬಾಕಿ ಗೌರವಧನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿ ಆದೇಶಿಸಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. 2021-22ನೇ ಸಾಲಿನ ಆಶಾ ಕಾರ್ಯಕರ್ತೆಯರಿಗೆ ಗೌರವಧನ ವಿತರಣೆ ಮಾಡಲು ಮೂರನೇ ತ್ರೈ ಮಾಸಿಕ ಅನುದಾನ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ಐಫೋನ್ ಬಳಕೆದಾರರೇ ಎಚ್ಚರ ; ‘ಹೆಚ್ಚಿನ ಅಪಾಯ’ದ ಎಚ್ಚರಿಕೆ ನೀಡಿದೆ ಸರ್ಕಾರ ; ಏನು ಮಾಡ್ಬೇಕು.? ಇಲ್ಲಿದೆ ಮಾಹಿತಿ
ಡಿ ಬಿಟಿ ಪೋರ್ಟ್ ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಪಾವತಿಸವುದಾಗಿ ಸರ್ಕಾರ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಗಳು ಡಿಬಿಟಿ ಪೋರ್ಟ್ ನಲ್ಲಿ ಗೌರವಧನವನ್ನು ಪಾವತಿಸುವುದು. ಏಪ್ರಿಲ್ 2022ರ ತಿಂಗಳಿನಿಂದ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ರೂ.1000ಕ್ಕೆ ಹೆಚ್ಚಿಸಿ ಆದೇಶಿಸಿದೆ ಎಂದು ಹೇಳಿದ್ದಾರೆ.
BIGG NEWS: ಪಟಾಕಿ ತಂದ ಆಪತ್ತು; ಪಟಾಕಿ ಸಿಡಿತದಿಂದ 78 ಮಕ್ಕಳಿಗೆ ಗಾಯ
2022-23ನೇ ಸಾಲಿಗೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಗೆ ಎರಡನೇ ತ್ರೈ-ಮಾಸಿಕ ಅವಧಿಗೆ ರೂ.6378.30 ಲಕ್ಷಗಳ ಅನುದಾನ ಬಿಡುಗಡೆಯಾಗಿರುತ್ತದೆ. ಅನುದಾನದಲ್ಲಿ ಜಿಲ್ಲೆಗಳಿಗೆ ಮಂಜೂರಾದ ಆಶಾ ಕಾರ್ಯಕರ್ತೆಯರ ಸಂಖ್ಯೆಗೆ ಅನುಗುಣವಾಗಿ ಪ್ರತಿ ತಿಂಗಳಿಗೆ ರೂ.5000ರಂತೆ ಸೆಪ್ಟೆಂಬರ್-2022, ಅಕ್ಟೋಬರ್-2022 ಮತ್ತು ನವೆಂಬರ್-2022ರ ಮಾಹೆಗೆ ರೂ.63,78,30,000 ಗಳನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.