ಬೆಂಗಳೂರು: ಏಯ್ ನಾನು ಲೋಕಲ್. ಪಟಾಕಿ ಕೊಡೋ ಅಂತ ಪ್ರೀಯಾಗಿ ಬಿಜೆಪಿ ಪುರಸಭೆ ಸದಸ್ಯೆ ಪತಿಯೊಬ್ಬ ಅಂಗಡಿ ಮಾಲೀಕನಿಗೆ ಅವಾಜ್ ಹಾಕಿದ್ದಾರೆ. ಅಲ್ಲದೇ ಕೊಡದೇ ಇದ್ದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕನ ಮೇಲೆ ಥಳಿಸಿದ ಘಟನೆ ಆನೇಕಲ್ ನ ಹೊಸೂರು ಗೇಟ್ ಮುಖ್ಯ ರಸ್ತೆಯ ನೆರಳೂರು ಗೇಟ್ ಬಳಿಯಲ್ಲಿ ನಡೆದಿದೆ.
Gold prices: ದೀಪಾವಳಿ ಹಬ್ಬದ ಹೊತ್ತಲ್ಲೇ ಇಳಿಕೆಯಾದ ಬಂಗಾರದ ಬೆಲೆ: ಬೆಳ್ಳಿ ದರವೂ ಇಳಿಕೆ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಗೇಟ್ ಬಳಿಯಲ್ಲಿ ಕಿರಣ್ ಎಂಬುವರ ಅಂಗಡಿಗೆ ತೆರಳಿದಂತ ಚಂದಾಪುರು ಪುರಸಭೆಯ ಬಿಜೆಪಿ ಸದಸ್ಯೆ ಪತಿ ಚರಣ್ ಹಾಗೂ ಆತನ ಸಹಚರರು ಏಯ್ ನಾನು ಲೋಕಲ್ ಪಟಾಕಿ ಕೊಡು ಎಂಬುದಾಗಿ ಅವಾಜ್ ಹಾಕಿದ್ದಾರೆ. ಈ ವೇಳೆ ಅಂಗಡಿ ಮುಚ್ಚಿತ್ತಿದ್ದೇನೆ. ಈಗ ಬಂದಿದ್ದೀರಿ. ಬೆಳಿಗ್ಗೆ ಬನ್ನಿ ಎಂಬುದಾಗಿ ಕಿರಣ್ ಹೇಳಿದ್ದಾರೆ.
BIGG NEWS : ಶಿವಮೊಗ್ಗ ಜಿಲ್ಲೆಯಲ್ಲಿ ‘ಭಗವದ್ಗೀತೆ’ ಹೋಲುವ ಪುಸ್ತಕ ಮಾರಾಟ, ಹಿಂದೂ ಧರ್ಮದ ಅವಹೇಳನ : ಕೇಸ್ ದಾಖಲು
ಇಷ್ಟಕ್ಕೆ ಸಿಟ್ಟಾದಂತ ಚಂದಾಪುರು ಪುರಸಭೆಯ ಬಿಜೆಪಿ ಸದಸ್ಯೆ ಪತಿ ಚರಣ್ ಹಾಗೂ ಆತನ 10ಕ್ಕೂ ಹೆಚ್ಚು ಸಹಚರರು ಪಟಾಕಿ ಅಂಗಡಿ ಮಾಲೀಕ ಕಿರಣ್ ಗೆ ಥಳಿಸಿದ್ದಾರೆ. ಇದರಿಂದಾಗಿ ಕಿರಣ್ ಹೊಟ್ಟೆ, ಎದೆ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿರೋದಾಗಿ ತಿಳಿದು ಬಂದಿದೆ. ಕೂಡಲೇ ಕಿರಣ್ ಅನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಅಂದಹಾಗೇ ಚಂದಾಪುರ ಪುರಸಭೆ ಸದಸ್ಯೆ ಪತಿ ಚರಣ್, ತೇಜಸ್, ಹರೀಶ್ ಹಾಗೂ ಗುರುರಾಜ್ ಸೇರಿದಂತೆ 10ಕ್ಕೂ ಹೆಚ್ಚು ಜನರು ಕಿರಣ್ ಥಳಿಸಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
BREAKING NEWS: ವರ್ಷದ ಕೊನೆಯ ಸೂರ್ಯ ಗ್ರಹಣ ಮುಕ್ತಾಯ: ರಾಜ್ಯದ ಹಲವು ದೇವಾಲಯಗಳಲ್ಲಿ ಶುದ್ಧಿ ಕಾರ್ಯ ಆರಂಭ