ವಾಷಿಂಗ್ಟನ್: ವಾಷಿಂಗ್ಟನ್ ಶ್ವೇತಭವನದಲ್ಲಿ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ದೀಪಾವಳಿ ಆಚರಿಸಲಾಯ್ತು. ಶ್ವೇತಭವನವು ಇತಿಹಾಸದಲ್ಲಿಯೇ ಅತಿ ಹೆಚ್ಚು ಏಷ್ಯನ್ ಅಮೆರಿಕನ್ನರನ್ನ ಹೊಂದಿದೆ. ಇದಲ್ಲದೆ, ಬೈಡನ್ ಆಡಳಿತವು ಹೆಚ್ಚಿನ ಸಂಖ್ಯೆಯ ಭಾರತೀಯ ಅಮೆರಿಕನ್ನರನ್ನ ಹೊಂದಿದೆ. ಹಾಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ “ನಿಮಗೆ ಆತಿಥ್ಯ ವಹಿಸುವುದು ನಮಗೆ ಒಂದು ಗೌರವವಾಗಿದೆ” ಎಂದಿದ್ದಾರೆ. ಅಂದ್ಹಾಗೆ, ಇದೇ ಮೊದಲ ಬಾರಿಗೆ ಶ್ವೇತಭವನದಲ್ಲಿ ಈ ಪ್ರಮಾಣದ ದೀಪಾವಳಿಯ ಸ್ವಾಗತವನ್ನ ಆಯೋಜಿಸಲಾಗುತ್ತಿದೆ.
ಈ ದೀಪಾವಳಿ ಆಚರಣೆಯನ್ನ ಅಮೆರಿಕನ್ ಸಂಸ್ಕೃತಿಯ ಭಾಗವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು. ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ದೀಪಾವಳಿಯ ಶುಭಾಶಯಗಳು. ದೀಪಾವಳಿಯನ್ನ ಸಂತೋಷದಿಂದ ಆಚರಿಸಿದ್ದಕ್ಕಾಗಿ ಅಮೆರಿಕದ ಏಷ್ಯನ್ ಅಮೆರಿಕನ್ ಸಮುದಾಯಕ್ಕೆ ಬೈಡನ್ ಧನ್ಯವಾದ ಅರ್ಪಿಸಿದರು. ಈ ಹಬ್ಬದ ಸಮಯದಲ್ಲಿ ದೀಪಗಳನ್ನು ಬೆಳಗಿಸುವುದು ಸಹ ಸಂತೋಷಕರವಾಗಿದೆ. ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಆರ್ಥಿಕತೆಯನ್ನು ಬಲಪಡಿಸಲು ಯುಎಸ್ನಾದ್ಯಂತ ದಕ್ಷಿಣ ಏಷ್ಯಾದ ಅಮೆರಿಕನ್ನರು ತೋರಿದ ಪರಿಶ್ರಮ ಮತ್ತು ಧೈರ್ಯಕ್ಕೆ ಧನ್ಯವಾದಗಳು ಎಂದರು.
ಈ ದೀಪಾವಳಿ ಹಬ್ಬವನ್ನು ಕತ್ತಲೆಯ ಮೇಲೆ ಬೆಳಕನ್ನು ಗುರುತಿಸಲು ಆಚರಿಸಲಾಗುತ್ತಿದೆ. ಈ ಸಂಭ್ರಮದೊಂದಿಗೆ, ಅಮೆರಿಕ ಮತ್ತು ಇಡೀ ವಿಶ್ವವನ್ನ ಜ್ಞಾನದ ಬೆಳಕಿನಿಂದ ತುಂಬೋಣ” ಎಂದು ಅವರು ಹೇಳಿದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್. “ಈ ಶ್ವೇತಭವನವು ಜನರ ಮನೆಯಾಗಿದೆ, ಮತ್ತು ಈ ಸಾಂಪ್ರದಾಯಿಕ ಸಮಾರಂಭವನ್ನ ನಮ್ಮ ಅಧ್ಯಕ್ಷ, ಪ್ರಥಮ ಮಹಿಳೆ ಜಿಲ್ ಬೈಡನ್ ಅವರೊಂದಿಗೆ ಆಚರಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ” ಎಂದರು. ಇನ್ನು ಈ ದೀಪಾವಳಿ ಹಬ್ಬವು ಏಷ್ಯನ್ ಅಮೆರಿಕನ್ ಸಮುದಾಯವು ಮುಂದೆ ಸಾಗಲು ಸಹಾಯ ಮಾಡುತ್ತಿದೆ ಎಂದು ಜಿಲ್ ಬೈಡನ್ ಹೇಳಿದರು. ಇದು ಎಲ್ಲರನ್ನೂ ಒಟ್ಟುಗೂಡಿಸುವ ಮತ್ತು ಸಮಾನತೆಯನ್ನು ನೆನಪಿಸುವ ಹಬ್ಬವಾಗಿದೆ. ಇದರ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
#WATCH | US President Joe Biden, First lady Jill Biden and Vice-President Kamala Harris celebrate the festival of #Diwali at the White House pic.twitter.com/WPOOYSW2zo
— ANI (@ANI) October 24, 2022
BIG NEWS: ದೀಪಾವಳಿಯಂದು ಪುಣೆಯಲ್ಲಿ ಪಟಾಕಿಯಿಂದ 17 ಅಗ್ನಿ ಅವಘಡಗಳು ವರದಿ | firecrackers incidents in Pune
BIGG NEWS : ಶಿವಮೊಗ್ಗ ಜಿಲ್ಲೆಯಲ್ಲಿ ‘ಭಗವದ್ಗೀತೆ’ ಹೋಲುವ ಪುಸ್ತಕ ಮಾರಾಟ, ಹಿಂದೂ ಧರ್ಮದ ಅವಹೇಳನ : ಕೇಸ್ ದಾಖಲು