ಢಾಕಾ(ಬಾಂಗ್ಲಾದೇಶ): ಸೋಮವಾರ ಸಿತ್ರಾಂಗ್ ಚಂಡಮಾರುತವು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ತನ್ನ ಪ್ರಬಾವ ಬೀರಿದೆ. ಮನೆ ಗೋಡೆ ಕುಸಿದು ಮತ್ತು ಮರಗಳು ಬಿದ್ದು ಒಂದು ಕುಟುಂಬದ ಮೂವರು ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಾವು-ನೋವಿನ ನಂತ್ರ ಅಗ್ನಿಶಾಮಕ ಸೇವೆ ಮತ್ತು ಸಿವಿಲ್ ಡಿಫೆನ್ಸ್ನಿಂದ ಮೇಲ್ವಿಚಾರಣಾ ಕಾರ್ಯ ಮುಂದುವರೆದಿದೆ. ಸಿತ್ರಾಂಗ್ ಚಂಡಮಾರುತದಿಂದ ಉಂಟಾದ ಪ್ರತಿಕೂಲ ಹವಾಮಾನದಿಂದಾಗಿ ಬಾಂಗ್ಲಾದೇಶದ ಕಾಕ್ಸ್ ಬಜಾರ್ ಕರಾವಳಿಯಿಂದ ಸಾವಿರಾರು ಜನರು ಮತ್ತು ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಸೋಮವಾರ ಚಂಡಮಾರುತದ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸಿತ್ರಾಂಗ್ ಚಂಡಮಾರುತದ ಅಬ್ಬರ ಜೋರಾಗಿದ್ದರಿಂದ ಢಾಕಾ, ಕುಮಿಲ್ಲಾ ದೌಲತ್ಖಾನ್ನ ನಾಗಲ್ಕೋಟ್ ಮತ್ತು ಭೋಲಾದ ಚಾರ್ಫೆಸನ್ ಮತ್ತು ನರೈಲ್ನ ಲೋಹಗರದಲ್ಲಿ ಈ ಘಟನೆಗಳು ಸಂಭವಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನೂ, ಭಾರತದ ಈಶಾನ್ಯ ರಾಜ್ಯಗಳಲ್ಲೂ ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.