ಚಿಕ್ಕಬಳ್ಳಾಪುರ: ಕೋವಿಡ್ ( Covid19 Case ) ಕಾರಣದಿಂದಾಗಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥವಾಗಿದ್ದಂತ 9 ಮಕ್ಕಳನ್ನು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ದತ್ತು ತೆಗೆದುಕೊಂಡಿದ್ದಾರೆ. ಈ ಮೂಲಕ ದೀಪಾವಳಿ ಹಬ್ಬದ ( Deepavali Festival ) ದಿನದಂದೇ ಮಾವೀಯತೆಯ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕರೋನಾದಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ 9 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆ. ದೀಪಾವಳಿಯ ಈ ಶುಭದಿನದಂದು ಅವರನ್ನು ಭೇಟಿಯಾಗಿ ಅವರ ಜೊತೆ ಹಬ್ಬದ ಊಟ ಸವಿದು, ಅವರ ಯೋಗಕ್ಷೇಮ ವಿಚಾರಿಸಲಾಯಿತು ಎಂದು ತಿಳಿಸಿದ್ದಾರೆ.
ಕರೋನಾದಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ 9 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆ.
ದೀಪಾವಳಿಯ ಈ ಶುಭದಿನದಂದು ಅವರನ್ನು ಭೇಟಿಯಾಗಿ ಅವರ ಜೊತೆ ಹಬ್ಬದ ಊಟ ಸವಿದು, ಅವರ ಯೋಗಕ್ಷೇಮ ವಿಚಾರಿಸಲಾಯಿತು.
1/3 pic.twitter.com/uQATxwiH6S
— Dr Sudhakar K (@mla_sudhakar) October 24, 2022
ಮತ್ತೊಬ್ಬರ ಬಾಳಿಗೆ ಬೆಳಕಾಗುವ ಈ ಪುಣ್ಯ ಕಾರ್ಯ ಮಾಡಲು ನನಗೆ ಪ್ರೇರೇಪಣೆ ನೀಡಿದ ಆ ಭಗವಂತನಿಗೆ ಕೋಟಿ ಪ್ರಣಾಮಗಳು. ಈಗಾಗಲೇ ಎಲ್ಲಾ 9 ಮಕ್ಕಳಿಗೂ ತಲಾ ₹1 ಲಕ್ಷ ಸಹಾಯಧನ ನೀಡಲಾಗಿದ್ದು, ಅವರ ಶಿಕ್ಷಣ ಹಾಗೂ ಇತರ ಜವಾಬ್ದಾರಿಗಳನ್ನು ನಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮುಖಾಂತರ ವಹಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬರ ಬಾಳಿಗೆ ಬೆಳಕಾಗುವ ಈ ಪುಣ್ಯ ಕಾರ್ಯ ಮಾಡಲು ನನಗೆ ಪ್ರೇರೇಪಣೆ ನೀಡಿದ ಆ ಭಗವಂತನಿಗೆ ಕೋಟಿ ಪ್ರಣಾಮಗಳು.
ಈಗಾಗಲೇ ಎಲ್ಲಾ 9 ಮಕ್ಕಳಿಗೂ ತಲಾ ₹1 ಲಕ್ಷ ಸಹಾಯಧನ ನೀಡಲಾಗಿದ್ದು, ಅವರ ಶಿಕ್ಷಣ ಹಾಗೂ ಇತರ ಜವಾಬ್ದಾರಿಗಳನ್ನು ನಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮುಖಾಂತರ ವಹಿಸಿಕೊಳ್ಳಲಾಗಿದೆ.
2/3 pic.twitter.com/wk26aEvNzM
— Dr Sudhakar K (@mla_sudhakar) October 24, 2022
ಮಕ್ಕಳೆಲ್ಲಾ ವಿದ್ಯಾವಂತರಾಗಿ, ಸತ್ಪ್ರಜೆಗಳಾಗಿ, ಯಶಸ್ವೀ ಜೀವನ ನಡೆಸುವಂತಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಮಕ್ಕಳೆಲ್ಲಾ ವಿದ್ಯಾವಂತರಾಗಿ, ಸತ್ಪ್ರಜೆಗಳಾಗಿ, ಯಶಸ್ವೀ ಜೀವನ ನಡೆಸುವಂತಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
3/3 pic.twitter.com/IK04I2BnzX
— Dr Sudhakar K (@mla_sudhakar) October 24, 2022