ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಪೊಲೀಸ್ ಇಲಾಖೆಯಲ್ಲಿ ( Karnataka Police Department ) ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯ ಪೊಲೀಸ್ (ಶಿಸ್ತು ನಡಾವಳಿ) ನಿಯಮಗಳಿಗೆ ತಿದದುಪಡಿಯನ್ನು ತಂದಿದೆ. ಈ ತಿದ್ದುಪಡಿಯಂತೆ ಕರ್ತವ್ಯದ ವೇಳೆ ಅಶಿಸ್ತು ಅಥವಾ ಕರ್ತವ್ಯ ಲೋಪ ತೋರಿದ್ರೇ, ಇನ್ಮುಂದೆ ಪೊಲೀಸ್ ಸಿಬ್ಬಂದಿಗೆ ( Police Employee ) ದಂಡದ ಜೊತೆಗೆ, ಸೇವೆಯಿಂದ ವಜಾ ಶಿಕ್ಷೆಯನ್ನು ವಿಧಿಸಲಾಗುತ್ತದೆ.
Firecrackers Safety Tips: ನಿಮ್ಮ ‘ದೀಪಾವಳಿ ಸಂಭ್ರಮ’ದಲ್ಲಿ ತಪ್ಪದೇ ಈ ‘ಸುರಕ್ಷತಾ ಕ್ರಮ’ ಅನುಸರಿಸಿ
ಈ ಕುರಿತಂತೆ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಉಭಯ ಸದನಗಳಲ್ಲಿ ಮಂಡನೆಯಾದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) (ತಿದ್ದುಪಡಿ) ನಿಯಮಗಳು-2022ಕ್ಕೆ ರಾಜ್ಯಪಾಲರು ಅಂಕಿತ ಕೂಡ ಸೂಚಿಸಿದ್ದಾರೆ.
BREAKING NEWS : ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ದಿನವೇ ದುರಂತ : ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ಈ ತಿದ್ದುಪಡಿ ನಿಯಮದಂತೆ ಕರ್ತವ್ಯಲೋಪ ಎಸಗುವವರಿಗೆ ವಿಧಿಸುವ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲದಿರುವುದು ಸಹಿತ, ಮೇಲಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಆದ್ರೇ ಸೇವೆಯಿಂದ ವಜಾದಂತಹ ಕ್ರಮ ಸಬ್ ಇನ್ ಸ್ಪೆಕ್ಟರ್ ಅಥವಾ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ.
APPS 16 : ಈ 16 ಅಪ್ಲಿಕೇಶನ್ ನಿಮ್ಮ ಮೊಬೈಲ್ನಲ್ಲಿ ಇದ್ದರೇ ಕೂಡಲೇ ಡಿಲೀಟ್ ಮಾಡಿ