ಉಡುಪಿ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕುಸುಮ್ ಯೋಜನೆಯಡಿ ರಾಜ್ಯದ ಸುಮಾರು 3.50 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 3.50 ಲಕ್ಷ ರೈತಗರಿಗೆ ಉಚಿತವಾಗಿ ಸೌರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಕುಸುಮ್ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕೇಂದ್ರ ಸರ್ಕಾರದ ಸಹಾಯದಿಂದ ಅನುಷ್ಠಾನಗೊಳಿಸಲಾಗುವ ಈ ಯೋಜನೆಯಡಿ ರಾಜ್ಯದಲ್ಲಿ 1,000 ಮೆಗಾ ವ್ಯಾಟ್ ಸಾಮರ್ಥ್ಯದ 1,000 ಸೋಲಾರ್ ಫೀಡರ್ ಗಳನ್ನು ಸ್ಥಾಪನೆ ಮಾಡಲಾಗುವುದು. ಇವುಗಳಿಂದ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಇದರಿಂದ 7 ಗಂಟೆ ನಿರಂತರ ವಿದ್ಯುತ್ ಪೂರೈಕೆಯಾಗಲಿದೆ ಎಂದರು.
Lakshmi Puja 2022: ʻಲಕ್ಷ್ಮಿ ದೇವಿʼ ಪೂಜೆ ವೇಳೆ ನಾವು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಪ್ರಮುಖ ಮಾಹಿತಿ
ಇನ್ನು ರಾಜ್ಯದಲ್ಲಿ 3 ತಿಂಗಳಿಗೊಮ್ಮೆ ವಿದ್ಯುತ್ ಬೆಲೆ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಕಲ್ಲಿದ್ದಲು ಮತ್ತು ತೈಲ ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ಬೆಲೆ ಕೂಡ ಇಳಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ.