ದಕ್ಷಿಣ ಕನ್ನಡ: ಅಕ್ಟೋಬರ್ 25ರಂದು ಸೂರ್ಯಗ್ರಹಣದಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ( kukke subramanya temple ) ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಅಂದು ಯಾವುದೇ ಸೇವೆಗಳನ್ನು ಕೂಡ ನಡೆಸುವುದಿಲ್ಲ. ಕೇವಲ ಕುಕ್ಕೆ ಸುಬ್ರಹ್ಮಣ್ಯಸ್ವಾಮಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
BIGG NEWS : ರಾಜ್ಯಕ್ಕೆ ಒಂದು ವರ್ಷದಲ್ಲಿ ಮಹದಾಯಿ ನೀರು ಬರಲಿದೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಈ ಕುರಿತಂತೆ ದೇವಳದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅ.25ರಂದು ಸೂರ್ಯಗ್ರಹಣ ಹಿನ್ನಲೆಯಲ್ಲಿ ನಾಗಾರಾಧನೆಯ ಪುಣ್ಯ ತಾಣ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರ ಹೊರತಾಗಿ ಯಾವುದೇ ಸೇವೆಗಳು ನೆರವೇರುವುದಿಲ್ಲ. ಭೋಜನ ಪ್ರಸಾದ ವಿತರಣೆಯೂ ಇರುವುದಿಲ್ಲ ಎಂದು ತಿಳಿಸಿದೆ.
BIG NEWS: ಇಂದು ನಡೆಯಬೇಕಿದ್ದ ಚಿತ್ತಾಪುರ, ಅಳಂದದ ‘ಜನಸಂಕಲ್ಪ ಯಾತ್ರೆ’ ಮುಂದೂಡಿಕೆ – ಎನ್.ರವಿಕುಮಾರ್
ಅಂದಹಾಗೇ ಅಕ್ಟೋಬರ್ 25ರಂದು ಬೆಳಿಗ್ಗೆ 7 ರಿಂದ 8.30ರ ತನಕ, 10.30 ರಿಂದ ಮಧ್ಯಾಹ್ನ 1ರ ತನಕ ಹಾಗೂ ಗ್ರಹಣದ ಸಮಯವಾದ ಸಂಜೆ 5.11 ರಿಂದ 6.28ರ ತನಕ, ಅಕ್ಟೋಬರ್ 26ರಂದು ಬೆಳಿಗ್ಗೆ 9 ಗಂಟೆಯ ನಂತ್ರ ದೇವರ ದರುಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.