ಉತ್ತರ ಪ್ರದೇಶದ: ಇಂದು ಬೆಳ್ಳೊ ಬೆಳಗ್ಗೆ ಪ್ರಯಾಣಿಕರ ಬಸ್ ಡಂಪರ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಬಳಿಯ ಆಗ್ರಾ-ಲಖನೌ ಎಕ್ಸ್ಪ್ರೆಸ್ವೇಯಲ್ಲಿ ನಡೆದಿದೆ.
BIG NEWS : ಉಕ್ರೇನ್ ಮೇಲೆ ಮತ್ತೆ ದಾಳಿಗೆ ಯತ್ನಿಸಿದ ರಷ್ಯಾದ 36 ರಾಕೆಟ್ಗಳು ಉಡೀಸ್: ವೊಲೊಡಿಮಿರ್ ಝೆಲೆನ್ಸ್ಕಿ
ಬಸ್ ಯುಪಿಯ ಗೋರಖ್ಪುರದಿಂದ ರಾಜಸ್ಥಾನದ ಅಜ್ಮೀರ್ಗೆ ಹೋಗುತ್ತಿತ್ತು. ಮುಂಜಾನೆ 2.30ರ ಸುಮಾರಿಗೆ ಡಂಪರ್ನ ಟೈರ್ ಒಡೆದು ವೇಗವಾಗಿ ಬಂದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಗಾಯಾಳುಗಳನ್ನು ತಕ್ಷಣವೇ ಸೈಫೈನಲ್ಲಿರುವ ಪಿಜಿಐ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
Etawah, UP | A sleeper bus en route to Ajmer from Gorakhpur with passengers met with an accident on the Agra-Lucknow Expressway under Saifai PS. 4 people were killed & about 42 who are seriously injured have been admitted to Saifai's PGI Hospital: ADM
— ANI UP/Uttarakhand (@ANINewsUP) October 23, 2022