ಬೆಂಗಳೂರು: ನಗರದಲ್ಲಿ ಚೀನಾ ಮೂಲದ ಲೋನ್ ಕಂಪನಿಗಳಿಂದ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ನಗರದ 5 ಕಡೆಗಳಲ್ಲಿ ದಾಳಿ ನಡೆಸಿ, ವಂಚನೆ ಪ್ರಕರಣ ಸಂಬಂಧ 78 ಕೋಟಿ ಹಣವನ್ನು ಜಪ್ತಿ ಮಾಡಿದೆ.
ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗದ ಭರವಸೆ ಕೊಟ್ಟು, ಯುವಕರಿಂದ ಹಣ ಸಂಗ್ರಹಿಸಿ, ವಂಚಿಸಿದ್ದಂತ ಚೀನಾ ಮೂಲಕ ಕೀಪ್ ಶೇರ್ ಆಪ್ ಮೇಲೆ ದಾಳಿ ನಡೆಸಿದ್ದಂತ ಇಡಿ ಅಧಿಕಾರಿಗಳು 12 ಕಚೇರಿಗಳ ಮೇಲೆ ರೈಡ್ ಮಾಡಿ 5.88 ಕೋಟಿ ಹಣ ಜಪ್ತಿ ಮಾಡಿತ್ತು. ಅಲ್ಲದೇ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
‘ಚಾಮರಾಜನಗರ’ದಲ್ಲಿ ಅದ್ದೂರಿಯಾಗಿ ನಡೆದ ‘ವಿದ್ಯಾಗಣಪತಿ ವಿಸರ್ಜನೆ ಶೋಭಾಯಾತ್ರೆ’
ಈ ಬೆನ್ನಲ್ಲಿ ಇದೀಗ ಮತ್ತೆ ಬೆಂಗಳೂರಿನಲ್ಲಿ ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ದಾಖಲಾಗಿದ್ದಂತ 18 ಎಫ್ಐಆರ್ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗಿ, ಎಲ್ಲಾ ಲೋನ್ ಆಪ್ ಗಳು ಚೀನಾ ಮೂಲದ್ದವು ಎಂಬುದಾಗಿ ಪತ್ತೆಯಾಗಿತ್ತು.
BIG NEWS: ‘ರಾಜ್ಯ ಸರ್ಕಾರ’ದಿಂದ 2000-1 ರಿಂದ 2020-21ರವರೆಗೆ ‘ಶಿಕ್ಷಕರ ಎಲ್ಲಾ ನೇಮಕಾತಿ’ ತನಿಖೆ.?
ಕಡಿಮೆ ಸಾಲ ನೀಡಿ, ಅಧಿಕ ಬಡ್ಡಿ ವಸೂಲಿ ಮೂಲಕ ಸಾಲ ಪಡೆದಿದ್ದಂತ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದಂತ ಆರೋಪದ ಕೇಳಿ ಬಂದಿತ್ತು. ಅಲ್ಲದೇ ಭಾರತೀಯ ಮೂಲದ ಉದ್ಯೋಗಿಗಳನ್ನು ನಿರ್ದೇಶಕರನ್ನಾಗಿ ಕಂಪನಿ ನೇಮಿಸಿತ್ತು. ವಸೂಲಾಗಿದ್ದಂತ ಹಣವನ್ನು ಅಕ್ರಮವಾಗಿ ವಿದೇಶಿ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದುದಾಗಿ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ನಗರದ 5 ಕಡೆ ದಾಳಿ ಮಾಡಿರುವಂತ ಇಡಿ ಬರೋಬ್ಬರಿ 78 ಕೋಟಿ ಹಣ ಜಪ್ತಿ ಮಾಡಿದೆ.