ಕೆಎನ್ಎನ್ಡಿಜಿಟಲ್ ಡೆಸ್ಕ್ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಶನಿವಾರ ಉಕ್ರೇನ್ ಮೇಲೆ ರಷ್ಯಾ ರಾತ್ರೋರಾತ್ರಿ “ಬೃಹತ್ ದಾಳಿ” ನಡೆಸಿತು ಎಂದು ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ನೀಡಿದ ಝೆಲೆನ್ಸ್ಕಿ “ಆಕ್ರಮಣಕಾರ ನಮ್ಮ ದೇಶವನ್ನ ಭಯಭೀತಗೊಳಿಸುತ್ತಲೇ ಇದ್ದಾನೆ. ರಾತ್ರಿಯಲ್ಲಿ, ಶತ್ರುಗಳು ಬೃಹತ್ ದಾಳಿಯನ್ನ ಪ್ರಾರಂಭಿಸಿದರು. 36 ರಾಕೆಟ್’ಗಳು, ಅವುಗಳಲ್ಲಿ ಹೆಚ್ಚಿನವುಗಳನ್ನು ಹೊಡೆದುರುಳಿಸಲಾಯಿತು… ಇವು ನಿರ್ಣಾಯಕ ವಸ್ತುಗಳ ಮೇಲಿನ ನೀಚ ದಾಳಿಗಳಾಗಿವೆ. ಭಯೋತ್ಪಾದಕರ ವಿಶಿಷ್ಟ ತಂತ್ರಗಳು” ಎಂದು ಕಿಡಿಕಾರಿದ್ದಾರೆ.