ಚಾಮರಾಜನಗರ: ಪೊಲೀಸ್ ಗಣಪ ( Police Ganapa ) ಎಂದೆ ಹೆಸರುವಾಸಿಯಾದ ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಟಾಪನೆ ಮಾಡಲಾದ 60ನೇ ವರ್ಷದ ಪ್ರಯುಕ್ತ ಧರ್ಮರಕ್ಷಕ ಗಣಪತಿಯ ವಿಸರ್ಜನಾ ಮಹೋತ್ಸವ ಹಾಗೂ ಶೋಭಾಯಾತ್ರೆ ಇಂದು ಅದ್ದೂರಿಯಾಗಿ ನಡೆಯಿತು.
ಗಣಪತಿ ವಿಸರ್ಜನ ಮಹೊತ್ಸವದ ಹಿನ್ನೆಲೆ ಶೋಭಾ ಯಾತ್ರೆಯಲ್ಲಿ ನಂದಿ ಧ್ವಜ, ಗೊರವರ ಕುಣಿತ, ವೀರಭದ್ರ ಕುಣಿತ, ಗಾರುಡಿಗ ಗೊಂಬೆ, ನಾಸಿಕ್ ಡೋಲು ಕುಣಿತ, ಚಂಡೆ ಮದ್ದಾಳೆ, ಡೋಲು ,ಮಹಿಳಾ ವೀರಗಾಸೆ, ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿದ್ದವು.
BIG NEWS: ಕಾಂಗ್ರೆಸ್ #PayCM ಪೋಸ್ಟರ್ ಅಭಿಯಾನಕ್ಕೆ ಬಿಜೆಪಿಯಿಂದ #SaySiddu ಅಭಿಯಾನ ಆರಂಭ
ಶೋಭಾಯಾತ್ರೆ ಮೆರವಣಿಗೆಯು ಖಡಕ್ ಪುರ ಮೊಹಲ್ಲಾ ಬೀದಿ, ಅಂಬೇಡ್ಕರ್ ಬೀದಿ, ಡೀವಿಯಷನ್ ರಸ್ತೆ, ದೇವಾಂಗ ಬೀದಿ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ಸಂತೇಮರಳ್ಳಿ ವೃತ್ತ, ವೀರ ಮದಕರಿ ನಾಯಕರ ಬೀದಿ, ಭಗೀರಥ ಉಪ್ಪಾರ ಬೀದಿ, ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಬ ಎರಡನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭಾ ಕಚೇರಿ ರಸ್ತೆ, ಚಮಾಲ್ ಬೀದಿ, ವೀರಭದ್ರಸ್ವಾಮಿ ದೇವಸ್ಥಾನ ಮೂಲಕ ಹಾದು, ಜೈನರ ಬೀದಿ, ಕೊಳದ ಬೀದಿಯಲ್ಲಿ ಮೆರವಣಿಗೆ ಸಾಗಿ ನಂತರ ದೊಡ್ಡ ಅರಸನ ಕೊಳದಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು.
ಪೊಲೀಸ್ ಬಂದೂಬಸ್ತ್
ಗಣಪತಿ ವಿಸರ್ಜನಾ ಮೆರವಣಿಗೆ ಸಾಗುವ ಪ್ರತಿ ಮಾರ್ಗದಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅವರ ನೇತೃತ್ವದಲ್ಲಿ ವ್ಯಾಪಕ ಪೊಲೀಸ್ ಬಂದೂಬಸ್ತ್ ನಿಯೋಜಿಸಿದ್ದರು. ಜಿಲ್ಲೆಯ ಪೊಲೀಸರಲ್ಲದೆ, ದಕ್ಷಿಣ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಕೂಡ ಕಾರ್ಯನಿರ್ವಹಿಸಿದರು. ಒಬ್ಬರು ಎಸ್ಪಿ, ಒಬ್ಬರು ಎಎಸ್ಪಿ, ಐವರು ಡಿವೈಎಸ್ಪಿ, 25 ಇನ್ಸ್ಪೆಕ್ಟರ್ಗಳು, 40 ಸಬ್ ಇನ್ಸ್ಪೆಕ್ಟರ್ಗಳು, ಕಮಾಂಡೊ ಪಡೆ, 5 ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ 800ರಿಂದ 1000 ಸಿಬ್ಬಂದಿ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿತ್ತು.
ಇಲಾಖಾ ಸಿಬ್ಬಂದಿಗೆ 25 ವಿಡಿಯೊ ಕ್ಯಾಮೆರಾ ನೀಡಲಾಗಿದೆ. 25 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿಲಾಗಿದೆ. ದೇವಾಲಯ, ಚರ್ಚ್, ಮಸೀದಿಗಳ ಬಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಗುಪ್ತಚರ, ಅಪರಾಧ ಘಟಕಗಳನ್ನೂ ನಿಯೋಜಿಸಿದ್ದರು.
ವರದಿ : ರಾಮಸಮುದ್ರ ಎಸ್ ವೀರಭದ್ರಸ್ವಾಮಿ, ಚಾಮರಾಜನಗರ
BIGG BREAKING NEWS: 100 ರೂ ದೇಣಿಗೆ ಸಂಗ್ರಹ ಆದೇಶ ಹಿಂಪಡೆದ ‘ಶಿಕ್ಷಣ ಇಲಾಖೆ’