ಬೆಂಗಳೂರು: ಅಕ್ಟೋಬರ್ 22ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ( PM Narendra Modi ) ಅವರು 10 ಲಕ್ಷ ಉದ್ಯೋಗಾರ್ಥಿಗಳಿಗಾಗಿ 22ನೇ ಅಕ್ಟೋಬರ್ 2022ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಸಮಾವೇಶದ ಮೂಲಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಹೊಸದಾಗಿ ಸೇರ್ಪಡೆಯಾದ 75,000 ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುವುದು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ನೇಮಕಾತಿಗೊಂಡ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
BREAKING NEWS ; ‘SpiceJet’ ಮೇಲಿನ ನಿರ್ಬಂಧ ತೆರವು ; ಅ.30ರಿಂದ ‘ಪೂರ್ಣ ಸಾಮರ್ಥ್ಯ’ದಲ್ಲಿ ಕಾರ್ಯಾಚರಣೆ
ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹುಬ್ಬಳ್ಳಿಯಲ್ಲಿ ಮಾನ್ಯ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ಹೊಸ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಿದ್ದಾರೆ ಎಂದಿದೆ.
BREAKING NEWS ; ‘ಇಮ್ರಾನ್ ಖಾನ್’ಗೆ ಚುನಾವಣಾ ನಿಷೇಧ ; ‘ಎಲೆಕ್ಷನ್ ಕಮಿಷನ್’ ಹೊರಗೆ ಗುಂಡಿನ ದಾಳಿ
ಯುವಜನರಿಗಾಗಿ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ನಾಗರಿಕ ಕಲ್ಯಾಣಕ್ಕಾಗಿ ಇರುವ ಸರ್ಕಾರದ ನಿರಂತರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿಇದು ಒಂದು ಮಹತ್ವದ ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿಗಳ ನಿರ್ದೇಶನದಂತೆ ಎಲ್ಲಾ ಸಚಿವಾಲಯಗಳು ಹಾಗೂ ಇಲಾಖೆಗಳು ಮಂಜೂರಾದ ಹುದ್ದೆಗಳಿಗನುಸಾರವಾಗಿ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಮಿಷನ್ ಮೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ದೇಶಾದ್ಯಂತ ಆಯ್ಕೆಗೊಂಡ ಈ ಹೊಸ ಉದ್ಯೋಗಿಗಳು ಭಾರತ ಸರ್ಕಾರದ 38 ಸಚಿವಾಲಯಗಳು/ಇಲಾಖೆಗಳನ್ನು ಸೇರಲಿದ್ದಾರೆ. ಈ ಉದ್ಯೋಗಿಗಳು ವಿವಿಧ ದರ್ಜೆಗಳಲ್ಲಿ ಅಂದರೆ ಗ್ರೂಪ್ – ಎ, ಗ್ರೂಪ್ – ಬಿ (ಗೆಜೆಟೆಡ್) ಗ್ರೂಪ್ – ಬಿ (ನಾನ್ ಗೆಜೆಟೆಡ್) ಹಾಗೂ ಗ್ರೂಪ್ – ಸಿ ದರ್ಜೆಯ ಉದ್ಯೋಗಿಗಳಾಗಿ ಸರ್ಕಾರವನ್ನು ಸೇರಲಿದ್ದಾರೆ. ಕೇಂದ್ರೀಯ ಸಶಸ್ತ್ರಪಡೆ ಸಿಬ್ಬಂದಿ ವರ್ಗ ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಎಲ್ ಡಿ ಸಿ, ಸ್ಟೆನೋ, ಪಿಎ , ಇನ್ ಕಮ್ ಟ್ಯಾಕ್ಸ್ ಇನ್ಸ್ ಪೆಕ್ಟರ್ಸ್, ಎಂ ಟಿ ಎಸ್ ಇತ್ಯಾದಿ ಹುದ್ದೆಗಳಿಗೆ ಈ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
‘ಭಾರತ್ ಜೋಡೋ ಯಾತ್ರೆ’ : ರಾಯಚೂರಿನಲ್ಲಿ ರಾಜ್ಯ ‘ಕೈ’ ನಾಯಕರ ಪತ್ನಿಯರ ಜೊತೆ ‘ರಾಗಾ’ ಹೆ್ಜ್ಜೆ |Bharath Jodo Yathra
ಈ ನೇಮಕಾತಿಗಳನ್ನು ಸಚಿವಾಲಯಗಳು ಹಾಗೂ ಇಲಾಖೆಗಳು ತಾವೇ ಸ್ವತಃ ಅಥವಾ ಯು ಪಿ ಎಸ್ ಸಿ, ಎಸ್ ಎಸ್ ಸಿ, ನೇಮಕಾತಿ ಮಂಡಳಿ ಯಂತಹ ಏಜೆನ್ಸಿಗಳ ಮೂಲಕ ಮಾಡಲಾಗುತ್ತಿದೆ. ನೈಋತ್ಯ ರೈಲ್ವೆಯಲ್ಲಿ ಪ್ರಸ್ತುತ ಹಣಕಾಸು ವರ್ಷದಲ್ಲಿ (ಏಪ್ರಿಲ್ – ಅಕ್ಟೋಬರ್ 2022ರವರೆಗೆ) 350 ಉದ್ಯೋಗಿಗಳನ್ನು ಉದ್ಯೋಗಿಗಳ ನೇಮಕಾತಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 9500 ಖಾತೆಗಳನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದೆ.