ಕಾರವಾರ: ಈಜೋದಕ್ಕಾಗಿ ಸಮುದ್ರಕ್ಕೆ ಇಳಿದಿದ್ದಂತ ಸಿನಿಮಾ ನಟನೊಬ್ಬ, ಸಮುದ್ರದ ಅಲೆಯಲ್ಲಿ ಸಿಲುಕಿ, ಕೊಚ್ಚಿ ಹೋಗುತ್ತಿದ್ದಾಗ, ಆತನನ್ನು ಬೀಚ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಗೋಕರ್ಣದ ಕುಡ್ಲೆ ಬೀಚ್ ಗೆ ಹೈದರಾಬಾದ್ ಮೂಲಕ ಚಿತ್ರನಟ ಅಖಿಲ್ ರಾಜ್ ಎಂಬುವರು ಇಂದು ತೆರಳಿದ್ದರು. ಸಮುದ್ರದಲ್ಲಿ ಈಜಲು ಹೋಗಿದ್ದಂತ ಸಂದರ್ಭದಲ್ಲಿ ಅಲೆಗೆ ಕೊಚ್ಚಿ ಹೋಗಿ, ರಕ್ಷಣೆಗಾಗಿ ಕೂಗಿಕೊಂಡಿದ್ದರು.
‘ಭಾರತ್ ಜೋಡೋ ಯಾತ್ರೆ’ : ರಾಯಚೂರಿನಲ್ಲಿ ರಾಜ್ಯ ‘ಕೈ’ ನಾಯಕರ ಪತ್ನಿಯರ ಜೊತೆ ‘ರಾಗಾ’ ಹೆ್ಜ್ಜೆ |Bharath Jodo Yathra
ಅಖಿಲ್ ರಾಜ್ ಕೂಗಿದ್ದನ್ನು, ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದದ್ದನ್ನು ಕಂಡಂತ ಗೋಕರ್ಣ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಗಳು ಜಟ್ ಸ್ಕೀ ವಾಟರ್ ಬೈಕ್ ಮೂಲಕ ರಕ್ಷಿಸಿದ್ದಾರೆ.