ಶಿವಮೊಗ್ಗ : ಕರ್ನಾಟಕ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು 13 ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.
ಈ ಹುದ್ದೆಯು ಮಾಜಿ ಸೈನಿಕರಿಗೆ ಮಾತ್ರ ಮೀಸಲಾಗಿದ್ದು, ಪಿಯುಸಿ ಅಥವಾ ತತ್ಸಮಾನ ಮಾನ್ಯ ಪಡೆದ ಪದವಿ ಪೂರ್ವ ಕಾಲೇಜುಗಳಿಂದ ಪಡೆದಿರಬೇಕು. ಅಥವಾ 10ನೇ ತರಗತಿ ಉತ್ತೀರ್ಣಗೊಂಡು ಸೇನೆಯಲ್ಲಿ 15 ವರ್ಷಗಳಿಗೆ ಕಡಿಮೆಯಿಲ್ಲದೇ ಸೇವೆ ಸಲ್ಲಿಸಿ, ಪಡೆದ ಪದವಿ ಪ್ರಮಾಣ ಪತ್ರ ಹೊಂದಿರಬೇಕು.
ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಪ್ರಕರಣ : ಶ್ರೀಮಂತರ ಮನೆಗೆ ಕನ್ನ ಹಾಕಿ ದಾನ ದರ್ಮ ಮಾಡ್ತಿದ್ದ ‘ಕಳ್ಳ’ ಅರೆಸ್ಟ್
ಆಸಕ್ತರು ಸರ್ಕಾರಿ ಮುದ್ರಣಾಲಯದಲ್ಲಿ ಲಭ್ಯವಿರುವ ನಿಗದಿತ ನಮೂನೆ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಅರ್ಜಿಯೊಂದಿಗೆ ಸೇವಾಪುಸ್ತಕ, ಗುರುತಿನ ಚೀಟಿ, ವಿದ್ಯಾರ್ಹತೆ ದಾಖಲೆಗಳು, ಮೀಸಲಾತಿ ಸಂಬಂಧಿತ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ದಿ: 07/11/2022 ರೊಳಗಾಗಿ ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರ 560025 ವಿಳಾಸಕ್ಕೆ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪತ್ರದ ದಿ: 18/10/222ರ ಸಂಪುಟ 157 ಸಂಚಿಕೆ 210 ನ್ನು ಅನುಸರಿಸುವುದು.