ಹಾವೇರಿ : ಬರ, ಅತಿವೃಷ್ಟಿ ಬೆಳೆ ನಷ್ಟದಿಂದ 2022 ರ 10 ತಿಂಗಳಲ್ಲೇ ಹಾವೇರಿ ಜಿಲ್ಲೆಯಲ್ಲಿ 112 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬಹಿರಂಗವಾಗಿದೆ.
ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದ ಸಬ್ಇನ್ಸ್ಪೆಕ್ಟರ್ ಬಂಧನ
ಹಾವೇರಿ ಜಿಲ್ಲೆಯ ರೈತರು ಅತಿವೃಷ್ಟಿ, ಪ್ರವಾಹ, ಬೆಳೆಹಾನಿಯಿಂದ ನಲುಗಿ ಹೋಗಿದ್ದು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬರೋಬ್ಬರಿ 70 ಸಾವಿರ ಹೆಕ್ಟೇರ್ ಗೂ ಅಧಿಕ ಬೆಳೆಹಾನಿಯಾಗಿದೆ.
ನೆರೆ, ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಹಾನಿಯಾಗಿದ್ದು, ಕೃಷಿ, ತೋಟಗಾರಿಕೆ, ತರಕಾರಿ ಬೆಳೆಗಳೂ ಹಾನಿಯಾಗಿವೆ. ಸಾಲಕ್ಕೆ ಅಂಜಿ ರೈತರು ಆತ್ಮಹತ್ಯೆಗೆ ಹೆಜ್ಜೆ ಇಡುವಂತಾಗಿದೆ. ಜಿಲ್ಲೆಯ ಬಹುತೇಕ ರೈತರು ಬೆಳೆಹಾನಿ ಹಾಗೂ ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬಯಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ 2022 ರ ಜನವರಿಯಲ್ಲಿ 13 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಫೆಬ್ರವರಿಯಲ್ಲಿ 10, ಮಾರ್ಚ್ 13, ಏಪ್ರಿಲ್ 10, ಮೇ 10, ಜೂನ್ 9, ಜುಲೈ 8, ಆಗಸ್ಟ್ 12, ಸೆಪ್ಟೆಂಬರ್ 20, ಅಕ್ಟೋಬರ್ 7 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಜ್ಯದ ರೈಲ್ವೆ ಪ್ರಯಾಣಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಇಂದಿನಿಂದ ವಿಶೇಷ ರೈಲುಗಳ ಸಂಚಾರ