ಕೊಪ್ಪಳ : ಸ್ಥಳೀಯ ಸಂಸ್ಥೆಗಳ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ಜೀವಂತ ಪ್ರಮಾಣ ಪತ್ರವನ್ನು ನವೆಂಬರ್ ಮಾಹೆಯಲ್ಲಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
BIG NEWS: 8 ವರ್ಷ ವಯಸ್ಸಿನವರೆಗಿನ ಮಕ್ಕಳಿಗೆ ಸರ್ಕಾರಿ & ಖಾಸಗಿ ಶಾಲೆಗಳಲ್ಲಿ ಮಾತೃಭಾಷೆಯಲ್ಲೇ ಕಲಿಸಿ: NCF
ಸರ್ಕಾರವು ಸ್ಥಳೀಯ ಸಂಸ್ಥೆಗಳ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ಜೀವಂತ ಪ್ರಮಾಣ ಪತ್ರವನ್ನು ನವೆಂಬರ್ ಮಾಹೆಯಲ್ಲಿ ಪಡೆದುಕೊಳ್ಳಲು ಈ ಮೂಲಕ ಆದೇಶಿಸಲಾಗಿರುತ್ತದೆ. ಅಪರ ನಿರ್ದೇಶಕರು, ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆ ಬೆಂಗಳೂರು ಇವರ ನಿರ್ದೇಶನದಂತೆ 2022ನೇ ಸಾಲಿನ ಜೀವಂತ ಪ್ರಮಾಣ ಪತ್ರವನ್ನು ನವೆಂಬರ್ 2022ರ ಮಾಹೆಯಲ್ಲಿ ಆಯಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರ ದೃಢೀಕರಣದೊಂದಿಗೆ ಜಿಲ್ಲಾ ಖಜಾನೆ ಕೊಪ್ಪಳ ಕಾರ್ಯಾಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.