ಕಲಬುರಗಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಬಂದಿದೆ.
ಈ ಪರಿಣಾಮವಾಗಿ ನದಿ ನೀರು ಉಕ್ಕಿ ಹರಿಯಲು ಆರಂಭವಾಗಿದೆ. ಹೀಗಾಗಿ ವೀರ್ ಡ್ಯಾಂನಿಂದ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಸೇತುವೆ ಮುಳುಹಡೆಯಾಗಿದೆ. ಕಲಬುರಗಿ-ವಿಜಯಪುರ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ನದಿ ದಡದಲ್ಲಿರುವ ಅಫಜಲಪುರ ತಾಲೂಕಿನ ಮಣ್ಣೂರಿನ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತಗೊಂಡಿದೆ.
ಇತ್ತ, ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ ಪರಿಣಾಮವಾಗಿ 124.80 ಅಡಿ ಸಾಮರ್ಥ್ಯದ ಕೆಆರ್ಎಸ್ ಅಣೆಕಟ್ಟು ಮತ್ತೊಮ್ಮೆ ಭರ್ತಿಗೊಂಡಿದೆ. ಆ ಮೂಲಕ ವರ್ಷದಲ್ಲಿ ಮೂರನೇ ಬಾರಿ ಭರ್ತಿಗೊಂಡಂತಾಗಿದೆ. ಈ ಹಿಂದೆ ಜುಲೈ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಗೆ ಜಲಾಶಯ ಭರ್ತಿಗೊಂಡಿತ್ತು. ಸದ್ಯ ಅಣೆಕಟ್ಟು ಭರ್ತಿಗೊಂಡ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.