ಹಾಸನ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವಂತ ಹಾಸನಾಂಭ ದೇವರ ದರ್ಶನಕ್ಕಾಗಿ ( Hassanambha Temple ) ಸರದಿ ಸಾಲಿನಲ್ಲಿ ನಿಂತಿದ್ದಂತ ವ್ಯಕ್ತಿಯೊಬ್ಬ, ಇಂದು ಸಾವನ್ನಪ್ಪಿರೋ ಘಟನೆ ನಡೆದಿದೆ.
ಇಂದು ಹಾಸನಾಂಭ ದೇವತೆಯ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಕಂಬಿ ಹಿಡಿದು ವ್ಯಕ್ತಿಯೊಬ್ಬ ನಿಂತಿದ್ದನು. ಇಂತಹ ವ್ಯಕ್ತಿ ದಿಢೀರ್ ಕುಸಿದು ಬಿದ್ದು ಹಾಸನಾಂಭ ದೇವಾಲಯದ ಆವರಣದಲ್ಲಿಯೇ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿರುವಂತ ವ್ಯಕ್ತಿಯ ಯಾರು ಎನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ಸಾವನ್ನಪ್ಪಿದಂತ ವ್ಯಕ್ತಿಯ ಗುರುತು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.