ಜಕಾರ್ತ: ಇಂಡೋನೇಷ್ಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್ ಗ್ರ್ಯಾಂಡ್ ಮಸೀದಿಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಮಸೀದಿಯ ದೈತ್ಯ ಗುಮ್ಮಟ ಕುಸಿದಿರುವ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ದೃಶ್ಯಾವಳಿಗಳು ಇದೀಗ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ಮಸೀದಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಇದೀ ವೇಳೆ ಮೇಲ್ಭಾಗದಲ್ಲಿರುವ ಗುಮಟವು ಕುಸಿದು ಬೀಳುವುದನ್ನು ನೋಡಬಹುದು.
BREAKING: The dome of the Jakarta Islamic Centre Grand Mosque in Koja, Indonesia has collapsed after being engulfed in flames during renovations.
The cause of the incident is under investigation. pic.twitter.com/rsLxxAGPlv
— Benny Johnson (@bennyjohnson) October 19, 2022
ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮಸೀದಿಯಲ್ಲಿ ಜೀರ್ಣೋದ್ಧಾರ ಚಟುವಟಿಕೆಗಳು ನಡೆಯುತ್ತಿದ್ದ ವೇಳೇ ಈ ಗಟನೆ ನಡೆದಿದೆ ಎನ್ನಲಾಗಿದೆ.
ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.
WATCH VIDEO : ಕುರ್ಚಿ ಮೇಲೆ ಕುಂತಲ್ಲೇ ಹಾರಿ ಹೋಯ್ತು ಜಿಮ್ ಟ್ರೈನರ್ ಪ್ರಾಣ ಪಕ್ಷಿ… ಸಿಸಿಟಿವಿಯಲ್ಲಿ ದೃಶ್ಯ ಸೆರೆ
ದೀಪಾವಳಿಯಲ್ಲಿ ನಿಷೇಧಿತ ‘ಪಟಾಕಿ’ ಸಿಡಿಸಿದ್ರೆ 6 ತಿಂಗಳು ಜೈಲೂಟ ಗ್ಯಾರೆಂಟಿ |Crackers Ban