ಬೆಂಗಳೂರು : ಪ್ರತಿಷ್ಟಿತ ಕಾಲೇಜಿನ ಪ್ರೊಫೆಸರ್ ಒಬ್ಬ ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರ ಕಳುಹಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೊಫೆಸರ್ ಮಧುಸೂಧನ್ ಆಚಾರ್ಯ ಎಂಬಾತ ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಮಕ್ಕಳ ಇನ್ ಸ್ಟಾಗ್ರಾಂ ಮೂಲಕ ನೀಲಿ ಚಿತ್ರ ಕಳುಹಿಸಿದ್ದನು. ಮಕ್ಕಳ ನೀಲಿ ಚಿತ್ರ ಕಳುಹಿಸುವುದು ಹಾಗೂ ನೋಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಮಕ್ಕಳಿಗೆ ಪಾಠ ಹೇಳಿ ಸರಿ ದಾರಿಗೆ ತರುವ ಜವಾಬ್ದಾರಿ ಹುದ್ದೆಯಲ್ಲಿದ್ದ ಶಿಕ್ಷಕ ಈ ತರಹದ ಕೆಲಸ ಮಾಡಿದ್ದಾನೆ.
ಖಚಿತ ಮಾಹಿತಿ ಅನ್ವಯ ತಾಂತ್ರಿಕ ತನಿಖೆ ನಡೆಸಿದ ಸಿಐಡಿ ಸೈಬರ್ ಕ್ರೈಮ್ ಪೊಲೀಸರಿಗೆ ಯಲಹಂಕ ಪ್ರತಿಷ್ಟಿತ ಕಾಲೇಜಿನ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ಫ್ರೊಫೆಸರ್ ಮಧುಸೂಧನ್ ನನ್ನು ವಿಚಾರಣೆಗೆ ಕರೆಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಕೃತ್ಯ ಬಯಲಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಇದಲ್ಲದೇ ಈತ ಹಲವು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
BIG NEWS: ದೀಪಾವಳಿಗೂ ಮುನ್ನ ದೇಶದಲ್ಲಿ ಕೋವಿಡ್ ರೂಪಾಂತರಿ ʻXBBʼ ಹೆಚ್ಚಳ: ಇದು ಎಷ್ಟು ಡೇಂಜರ್, ತಜ್ಞರು ಹೇಳೋದೇನು?
ದೀಪಾವಳಿಯಲ್ಲಿ ನಿಷೇಧಿತ ‘ಪಟಾಕಿ’ ಸಿಡಿಸಿದ್ರೆ 6 ತಿಂಗಳು ಜೈಲೂಟ ಗ್ಯಾರೆಂಟಿ |Crackers Ban