ದೆಹಲಿ : ಇನ್ನೇನು ಕೆಲವೇ ದಿನ ದೀಪಾವಳಿ ಹಬ್ಬ ಬಂದೇ ಬಿಡ್ತು. ಕೆಲಸಕ್ಕಾಗಿ ತಮ್ಮ ಬೇರೆ ಊರುಗಳಲ್ಲಿರುವವರು ತಮ್ಮ ಊರುಗಳಿಗೆ ಹೋಗಲು ಸಿದ್ಧರಾಗುತ್ತಿದ್ದಾರೆ. ಇದೀ ವೇಳೆ ಭಾರತೀಯ ರೈಲ್ವೆ ತಮ್ಮ ಪ್ರಯಾಣಿಕರಿಗೆ ವಿಶೇಷ ಸೂಚನೆಯೊಂದನ್ನು ನೀಡಿದೆ.
ಹೌದು, ಎರಡು ವರ್ಷಗಳ ವಿರಾಮದ ನಂತರ ಕೊರೊನಾ ಕೊಂಚ ಕಡಿಮೆಯಾಗಿದ್ದು, ಇದೀಗ ಹಬ್ಬ ಆಚರಣೆಗಾಗಿ ವಲಸಿಗರಿಗೆ ಮನೆಗೆ ತೆರಳಲು ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ಸುಲಭಗಳಿಸಿದೆ ಜತೆಗೆ ಈ ವರ್ಷ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾಗಲಿದೆ . ಇನ್ನೂ ಭಾರತೀಯ ರೈಲ್ವೆ ಹಬ್ಬದ ಅವಧಿಯಲ್ಲಿ ತನ್ನ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಲಹೆ ಯನ್ನು ನೀಡಿದೆ. ಆದರೆ ಊರಿಗೆ ತೆರಳುವ ರೈಲು ಪ್ರಯಾಣಿಕರಿಗೆ ಹೊಸ ರೂಲ್ಸ್ ಜಾರಿಗೆ ತಂದಿದೆ.
ನೀವು ಸಹ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಈ ಕೆಲವು ಹೊಸ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ನೀವು ತಿಳಿದಿರಬೇಕು.
ಸಲಹೆಯ ಪ್ರಕಾರ, ಪ್ರಯಾಣಿಕರಿಗೆ ಈ ವಸ್ತುಗಳನ್ನು ರೈಲುಗಳಲ್ಲಿ ಸಾಗಿಸಲು ಅನುಮತಿಸಲಾಗುವುದಿಲ್ಲ:
* ಪೆಟ್ರೋಲ್, ಡೀಸೆಲ್, ಪಟಾಕಿಗಳು, ಇತ್ಯಾದಿಗಳಂತಹ ಯಾವುದೇ ದಹನಕಾರಿ ವಸ್ತುಗಳು.
* ಒಲೆ, ಗ್ಯಾಸ್, ಓವನ್
* ಕಂಪಾರ್ಟ್ಮೆಂಟ್ ಅಥವಾ ರೈಲಿನಲ್ಲಿಯೂ ಸಿಗರೇಟುಗಳಿಗೂ ನಿಷೇಧ ಹೇರಲಾಗಿದೆ.
ನಿಷೇಧಿತ ವಸ್ತುಗಳ ಸಮಗ್ರ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ನಿರ್ಬಂಧಗಳನ್ನು ಪಾಲಿಸಲು ವಿಫಲರಾದವರು ಜೈಲು ಶಿಕ್ಷೆಯನ್ನು ಅನುಭವಿಸುವ ಅಥವಾ ಭಾರಿ ದಂಡವನ್ನು ಪಾವತಿಸುವ ಸಾಧ್ಯತೆಯಿದೆ.
ಮೇಲೆ ತಿಳಿಸಲಾದ ಯಾವುದೇ ಸರಕುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ರೈಲ್ವೆ ಕಾಯ್ದೆ 1989 ರ ಸೆಕ್ಷನ್ 164 ಮತ್ತು 165 ರ ಅಡಿಯಲ್ಲಿ, ಪ್ರಯಾಣಿಕರು ಪಟಾಕಿ, ಸ್ಟೌವ್ಗಳು, ಗ್ಯಾಸ್ ಮತ್ತು ಪೆಟ್ರೋಲ್ನಂತಹ ದಹನಕಾರಿ ವಸ್ತುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುವುದು ಕಂಡುಬಂದರೆ, ಅವರ ಮೇಲೆ 1,000 ರೂ.ಗಳ ದಂಡವನ್ನು ವಿಧಿಸಬಹುದು. ಇದಲ್ಲದೆ, ಪ್ರಯಾಣಿಕನಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು.
WATCH VIDEO : ಕುರ್ಚಿ ಮೇಲೆ ಕುಂತಲ್ಲೇ ಹಾರಿ ಹೋಯ್ತು ಜಿಮ್ ಟ್ರೈನರ್ ಪ್ರಾಣ ಪಕ್ಷಿ… ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಾಜಕೀಯ ಭವಿಷ್ಯದ ಬಗ್ಗೆ ಸಚಿವ ‘ಶ್ರೀರಾಮುಲು’ ಅಚ್ಚರಿ ಹೇಳಿಕೆ : ನಿವೃತ್ತಿ ಘೋಷಣೆ…? | Sri Ramulu