ಬೆಂಗಳೂರು: ನವೆಂಬರ್ 1ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ವಾಹನ ಚಾಲನೆ ( Vehicle Driving ) ವೇಳೆಯಲ್ಲಿ ಸೀಟ್ ಬೆಲ್ಟ್ ( Seat Belt ) ಕಡ್ಡಾಯಗೊಳಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯವಾಗಿದೆ. ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯಗೊಳಿಸಿ ಡಿಜಿ-ಐಜಿಪಿ ಪ್ರವೀಣ್ ಸೂದ್ ( DG-IGP Praveen Sood ) ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು ಅ.19 ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ವಾಹನ ಚಾಲಾಯಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಅನ್ನು ಧರಿಸದೇ ವಾಹನವನ್ನು ಚಲಾಯಿಸಿದ್ರೇ ಅಂತವರಿಗೆ 1 ಸಾವಿರ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ.
ಅಂದಹಾಗೇ ವಾಹನ ಚಲಾಯಿಸುವಂತ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದರೇ ಅಪಘಾತವಾದಂತ ಸಂದರ್ಭದಲ್ಲಿ ಏರ್ ಬ್ಯಾಗ್ ಓಪನ್ ಆಗುವುದಿಲ್ಲ. ಹೀಗೆ ಏರ್ ಬ್ಯಾಗ್ ಓಪನ್ ಆಗದೇ ಇದ್ದಾಗ ಅಪಘಾತದ ವೇಳೆಯಲ್ಲಿ ಸಾವು ನೋವು ಸಂಭವಿಸಿವೆ. ಈ ಹಿನ್ನಲೆಯಲ್ಲಿಯೇ ಕೇಂದ್ರ ಸರ್ಕಾರ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯಗೊಳಿಸೋ ಕರಡನ್ನು ಪ್ರಕಟಿಸಿತ್ತು. ರಾಜ್ಯದಲ್ಲಿ ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುವವರಿಗೆ 500 ರು ದಂಡ ವಿಧಿಸಲಾಗುತ್ತಿದ್ದು, ಬುಧವಾರದಿಂದ ಆ ದಂಡದ ಮೊತ್ತವು 1 ಸಾವಿರ ರು.ಗಳಿಗೆ ಏರಿಕೆ ಆಗಿದೆ.
BIGG NEWS : ರಾಜ್ಯದಲ್ಲಿ ‘ಅನಧಿಕೃತ ಟ್ಯೂಷನ್ ಸೆಂಟರ್’ ನಡೆಸಿದ್ರೆ ಕ್ರಮ : ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಎಚ್ಚರಿಕೆ