ಲಂಡನ್: ಬ್ರಿಟನ್ನ ಗೃಹ ಕಾರ್ಯದರ್ಶಿಯಾಗಿದ್ದ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್ಮನ್(Suella Braverman) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಪ್ರಧಾನಿ ಲಿಜ್ ಟ್ರಸ್ ಸರ್ಕಾರಕ್ಕೆ ಮತ್ತೊಂದು ಹೊಡೆತವಾಗಿದೆ.
ಲಿಜ್ ಟ್ರಸ್ ಬ್ರಿಟನ್ನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರ ಸರ್ಕಾರದಿಂದ ಒಬ್ಬೊಬ್ಬರೇ ಹೊರ ಹೋಗುತ್ತಿದ್ದಾರೆ. ಶುಕ್ರವಾರ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಒಂದು ವಾರದ ನಂತರ ಟ್ರಸ್ ಸಚಿವ ಸಂಪುಟದಿಂದ ಹೊರ ನಡೆದ ಉನ್ನತ ಸಚಿವರಲ್ಲಿ ಸುಯೆಲ್ಲಾ ಒಬ್ಬರಾಗಿದ್ದಾರೆ.
ಸುಯೆಲ್ಲಾ ಬ್ರಾವರ್ಮನ್ ರಾಜೀನಾಮೆ ಕುರಿತು ಯುಕೆ ಮಾಧ್ಯಮಗಳು ಬುಧವಾರ ವರದಿ ಮಾಡಿವೆ. ಇದೀಗ ಹೊಸ ನಾಯಕನನ್ನು ಆಯ್ಕೆ ಮಾಡುವ ಗೊಂದಲದಲ್ಲಿ ಯುಕೆ ಸರ್ಕಾರವಿದೆ.
ಲಿಜ್ ಟ್ರಸ್ ಅವರು ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ ಎಂದು ಸುಯೆಲ್ಲಾ ಬ್ರಾವರ್ಮನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇಮೇಲ್ ಮಾಡುವ ಮೂಲಕ ಲಿಜ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
BIGG NEWS : ರಾಜ್ಯದಲ್ಲಿ ‘ಅನಧಿಕೃತ ಟ್ಯೂಷನ್ ಸೆಂಟರ್’ ನಡೆಸಿದ್ರೆ ಕ್ರಮ : ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಎಚ್ಚರಿಕೆ