ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ನಗರ ಪೊಲೀಸ್ ಠಾಣೆಯ ( Hiriyur Town Police Station ) ಮುಂಭಾಗದಲ್ಲಿಯೇ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇದರಿಂದಾಗಿ ವಾಹನ ಸವಾರರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಗುಂಡಿ ಮುಚ್ಚುವಂತೆ ಇದೀಗ ಹಿರಿಯೂರು ಜನತೆ ವಾಟ್ಸಾಪ್ ಅಭಿಯಾನವನ್ನೇ ( WhatsApp campaign ) ಆರಂಭಿಸಿದ್ದಾರೆ.
ಈ ಕುರಿತಂತೆ ಸೋಷಿಯಲ್ ಮೀಡಿಯಾಗಳಲ್ಲಿ ( Social Media ) ಹಿರಿಯೂರು ನಗರಸಭೆ ಅಧಿಕಾರಿಗಳನ್ನು ಎಚ್ಚರಿಸೋದಕ್ಕೆ ಅಭಿಯಾನವನ್ನು ಆರಂಭಿಸಿರುವಂತ ಸಾರ್ವಜನಿಕರು, ಹಿರಿಯೂರು ನಗರದ ಮುಖ್ಯ ರಸ್ತೆಯಲ್ಲಿನ ನಗರ ಪೊಲೀಸ್ ಠಾಣೆ ಮುಂಭಾಗದ ರಸ್ತೆಯ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ದಾರೆ.
ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದ ಸಮಗ್ರ ಅಭಿವೃದ್ಧಿ – ಸಿಎಂ ಬಸವರಾಜ ಬೊಮ್ಮಾಯಿ
ಗುಂಡಿ ಮುಚ್ಚಿ, ಪ್ರಾಣ ಉಳಿಸಿ, ಗುಂಡಿ ಯಾವಾಗ ಮುಚ್ಚುತ್ತಿರಾ ಅಧಿಕಾರಿಗಳೇ.? ಎಂಬುದಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಕೂಡಲೇ ರಸ್ತೆಯಲ್ಲಿನ ಗುಂಡಿಯನ್ನು ಮುಚ್ಚಬೇಕು. ಈ ಗುಂಡಿಯಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಪ್ರಾಣಹಾನಿ ಆಗುವ ಮೊದಲೇ ಎಚ್ಚೆತ್ತುಕೊಂಡು ಗುಂಡಿ ಮುಚ್ಚುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಹಿರಿಯೂರು ನಗರ ಸಭೆ ಅಧಿಕಾರಿಗಳು ( Hiriyur City Council Officer ) ಈಗಾಗಲೇ ನಗರ ಭಾಗದಲ್ಲಿ ಗುಂಡಿ ಮುಚ್ಚಿಸುವುದಕ್ಕೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದು ಸದರಿ ಗುತ್ತಿಗೆದಾರರು ಮಳೆ ಬರುತ್ತಿರುವುದರಿಂದ ಡಾಂಬರ್ ಪ್ಲಾಂಟ್ ಚಾಲನೆ ಇರುವುದಿಲ್ಲ ಮಳೆ ನಿಂತ ಮೇಲೆ ತುರ್ತಾಗಿ ಗುಂಡಿಗಳನ್ನೂ ಮುಚ್ಚಿಸಲು ಕ್ರಮ ವಹಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ.