ಬೆಂಗಳೂರು: ನವೆಂಬರ್ 1ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ವಾಹನ ಚಾಲನೆ ( Vehicle Driving ) ವೇಳೆಯಲ್ಲಿ ಸೀಟ್ ಬೆಲ್ಟ್ ( Seat Belt ) ಕಡ್ಡಾಯಗೊಳಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯವಾಗಿದೆ. ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯಗೊಳಿಸಿ ಡಿಜಿ-ಐಜಿಪಿ ಪ್ರವೀಣ್ ಸೂದ್ ( DG-IGP Praveen Sood ) ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಇಂದು ಆದೇಶ ಹೊರಡಿಸಿರುವಂತ ಅವರು, ಇಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯದಲ್ಲಿ ವಾಹನ ಚಾಲಾಯಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಅನ್ನು ಧರಿಸದೇ ವಾಹನವನ್ನು ಚಲಾಯಿಸಿದ್ರೇ ಅಂತವರಿಗೆ 1 ಸಾವಿರ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ.
ಅಂದಹಾಗೇ ವಾಹನ ಚಲಾಯಿಸುವಂತ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದರೇ ಅಪಘಾತವಾದಂತ ಸಂದರ್ಭದಲ್ಲಿ ಏರ್ ಬ್ಯಾಗ್ ಓಪನ್ ಆಗುವುದಿಲ್ಲ. ಹೀಗೆ ಏರ್ ಬ್ಯಾಗ್ ಓಪನ್ ಆಗದೇ ಇದ್ದಾಗ ಅಪಘಾತದ ವೇಳೆಯಲ್ಲಿ ಸಾವು ನೋವು ಸಂಭವಿಸಿವೆ. ಈ ಹಿನ್ನಲೆಯಲ್ಲಿಯೇ ಕೇಂದ್ರ ಸರ್ಕಾರ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯಗೊಳಿಸೋ ಕರಡನ್ನು ಪ್ರಕಟಿಸಿತ್ತು.