ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬರಿಗೂ ದೇಹದ ಪ್ರಮುಖವಾದ ಕಣ್ಣು ಅಂಗ. ನಾವು ದಣಿದಾಗ ಕಣ್ಣುಗಳು ಬಹಳ ಕಿರಿದಾಗಿ ಕಾಣುವುದನ್ನು ನಾವು ನೋಡಿರುತ್ತೇವೆ. ದೇಹದಲ್ಲಿನ ದೌರ್ಬಲ್ಯದಿಂದಾಗಿ ಇದು ಸಂಭವಿಸುತ್ತದೆ.
BIGG NEWS: ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪವಾಗಿ ಪರಿವರ್ತನೆ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ
ಅಲ್ಲದೆ ಸಾಕಷ್ಟು ನಿದ್ರೆಯ ಕೊರತೆ, ಜಂಕ್ ಫುಡ್ ಸೇವನೆ, ಒತ್ತಡ, ಗಂಟೆ ಗಟ್ಟಲೆ ಫೋನ್ ಬಳಕೆ, ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಪೌಷ್ಟಿಕ ಆಹಾರ ಸೇವಿಸದಿರುವುದು, ನಿರ್ಜಲೀಕರಣಕ್ಕೆ ಒಳಗಾಗುವುದು, ಕಚೇರಿಯಲ್ಲಿ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಬಳಕೆ, ಅಲ್ಲದೆ ನಾನಾ ರೀತಿಯ ಔಷಧಗಳ ಬಳಕೆಯಿಂದ ಕಣ್ಣಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಇಂತಹ ಸಮಸ್ಯೆಗಳಿಂದ ನಮ್ಮ ಕಣ್ಣುಗಳಿಗೆ ಸಮಸ್ಯೆ ಆರಂಭವಾಗುತ್ತದೆ. ಕಣ್ಣಿನ ಕೆಳಗೆ ಸುಕ್ಕುಗಳು ಉಂಟಾಗುತ್ತವೆ. ವಿವಿಧ ಕಾರಣಗಳಿಂದ ಕಣ್ಣಿನ ಕೆಳಗೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಈ ಸುಕ್ಕುಗಳು ಸೌಂದರ್ಯವನ್ನು ಕಡಿಮೆ ಮಾಡುತ್ತದೆ.
ಹೆಚ್ಚು ನೀರು ಕುಡಿಯಿರಿ
ಕಣ್ಣಿನ ಆರೋಗ್ಯ ಚೆನ್ನಾಗಿರಬೇಕೆಂದರೆ ನೀವು ಸದಾ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ. ಇದರಿಂದ ನಮ್ಮ ದೇಹವು ಆರೋಗ್ಯಕರವಾಗಿರುತ್ತದೆ. ನೀರು ನಮಗೆ ಬಹಳ ಮುಖ್ಯ. ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನೀರಿನ ಕೊರತೆಯಿಂದ ಅನೇಕ ರೋಗಗಳು ಹೆಚ್ಚಾಗುತ್ತವೆ. ಒಂದು ಗುಳಿಬಿದ್ದ ಕಣ್ಣುಗಳು ಮತ್ತು ದಣಿವು ಈ ಸಮಸ್ಯೆಗಳಲ್ಲಿ ಸೇರಿವೆ.
ಹಸಿರು ತರಕಾರಿಗಳು
ಹಸಿರು ತರಕಾರಿಗಳು ದೇಹಕ್ಕೆ ಬಹಳ ಮುಖ್ಯ. ಇದರಲ್ಲಿ ದೇಹಕ್ಕೆ ಬೇಕಾದ ಅನೇಕ ರೀತಿಯ ಪೋಷಕಾಂಶಗಳು ಇವೆ. ಇದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ. ಹಸಿರು ತರಕಾರಿಗಳು ಕಣ್ಣಿಗೆ ತುಂಬಾ ಒಳ್ಳೆಯದು. ವಿಟಮಿನ್ಗಳು ಚರ್ಮಕ್ಕೆ ಹೊಳಪನ್ನು ಕೂಡಾ ನೀಡುತ್ತದೆ. ಹಾಗಾಗಿ ಹಸಿರು ತರಕಾರಿಗಳನ್ನು ಸೇವಿಸಿದರೆ ಕಣ್ಣಿನ ಕೆಳಗಿನ ನೆರಿಗೆ ಕಡಿಮೆಯಾಗುತ್ತದೆ.